JBF ಉದ್ಯೋಗಿಗಳನ್ನು ನಡು ನೀರಿನಲ್ಲಿ ಕೈ ಬಿಟ್ಟಿತ್ತೇ GMPL !?

MSEZ ಗೆ ಭೂಮಿ ಕಳೆದುಕೊಂಡ ಕುಟುಂಬಗಳಿಗೆ ಖಾಸಗಿ ಸಂಸ್ಥೆಯಾದ JBF ನಲ್ಲಿ ಉದ್ಯೋಗ ದೊರಕಿಸಲು ಸ್ಥಳೀಯ ಜನ ಪ್ರತಿನಿಧಿಗಳು ಹೋರಾಟ ಮಾಡಿ ಸುಮಾರು 84 ಮಂದಿಗೆ ಖಾಸಗಿ ಕಂಪನಿಯಲ್ಲಿ ಕೆಲಸವನ್ನು ದೊರಕಿಸಿ ಕೊಡುವಲ್ಲಿ ಯಶಸ್ವಿಯಾಗಿದ್ದರು. ಸರ್ಕಾರಿ ಕಂಪನಿಯಲ್ಲಿ ಕೆಲಸ ದೊರೆಯುತ್ತದೆ ಎಂಬ ಆಶ್ವಾಸನೆಯಂತೆ ಜಾಗ ನೀಡಿದ್ದರೂ, ಪರಿಸ್ಥಿತಿಯ ಕೈ ಗೊಂಬೆಯಾಗಿ ತೀರಾ ಖಾಸಗಿ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಲು ಒಪ್ಪಿಕೊಂಡರು.

ಆದರೆ ನಂತರದ ದಿನಗಳಲ್ಲಿ ಆಡಳಿತ ಮಂಡಳಿಯ ತಪ್ಪು ನಿರ್ಧಾರಗಳಿಂದ ಕಂಪನಿಯು ಸಂಪೂರ್ಣವಾಗಿ ಮುಚ್ಚಿ ಹೋಯಿತು. ಸ್ಥಳೀಯ ನಾಯಕರುಗಳ ಜೊತೆ ಅಂದಿನ ಉಸ್ತುವಾರಿ ಸಚಿವರಾದ ಶ್ರೀ ಸುನಿಲ್ ಕುಮಾರ್, ಕೇಂದ್ರದ ಸಚಿವರಾದ ಪ್ರಹ್ಲಾದ್ ಜೋಶಿಯವರ ಸತತ ಪ್ರಯತ್ನದಿಂದ ಭಾರತದ ಎನ್‌ಸಿಎಲ್‌ಟಿ ಪ್ರಕ್ರಿಯೆಯಲ್ಲಿ ಪ್ರಥಮ ಎಂಬಂತೆ ಉದ್ಯೋಗಿಗಳಿಗೆ ಸಂಪೂರ್ಣ ವೇತನ ಮತ್ತು ಇತರ ಭತ್ತೆಗಳು ದೊರಕಿತು.

ಜೆಬಿಎಫ್ ಅನ್ನು ಸರ್ಕಾರಿ ಸೌಮ್ಯದ ಗೇಲ್ ಬಿಡ್ ಪ್ರಕ್ರಿಯೆ ಮೂಲಕ ಪಡೆದುಕೊಂಡ ಕಾರಣ ಈಗ ಉದ್ಯೋಗಿಗಳು ಅತಂತ್ರ ಸ್ಥಿತಿಯನ್ನು ಅನುಭವಿಸುವಂಥಾಗಿದೆ. DoPT ನಿಯಮಗಳಿಗೂ ಭೂ ಸ್ವಾಧೀನ ಸಂದರ್ಭದಲ್ಲಿ ಮಾಡಿರುವ ಒಪ್ಪಂದವು ತದ್ವಿರುದ್ಧವಾಗಿರುವ ಕಾರಣ ನಿರಾಶ್ರಿತರ ಸ್ಥಿತಿಯು ಡೋಲಾಯಮಾನವಾಗಿದೆ.

ಹೊಸದಾಗಿ ನೇಮಗೊಂಡ ಸಂಸದ ಬ್ರಿಜೇಶ್ ಚೌಟರು ಈ ಬಗ್ಗೆ ಹಲವು ಬಾರಿ ಅತ್ಯುನ್ನತ ಮಟ್ಟದಲ್ಲಿ ವಿವಿಧ ಸ್ತರಗಳಲ್ಲಿ ತನ್ನ ನೈಜ್ಯ ಕಾಳಜಿ ಪ್ರದರ್ಶಿಸಿ ಚರ್ಚೆ ನಡೆಸಿರುವುದು ಶ್ಲಾಘನೀಯ. ಕೇಂದ್ರ ಸಚಿವರು ಮತ್ತು ಕಂಪೆನಿ ಮುಖ್ಯಸ್ಥರೊಂದಿಗೆ ನಡೆದ ಮಾತುಕತೆ ಇವರೆಗೆ ನಡೆದ ಅತ್ಯುನ್ನತ ಮಟ್ಟದ ಸಭೆ ಆಗಿರುತ್ತದೆ.

ಆದರೆ ಈ ಮಧ್ಯೆ ಗೈಲ್ ಕಂಪನಿಯು 391 ಹೊಸ ಹುದ್ದೆಗಳಿಗೆ ನೇಮಕಾತಿಯನ್ನು ಪ್ರಕಟಿಸಿರುವುದು ಸಂಶಯಕ್ಕೆ ಕಾರಣವಾಗಿದೆ. ಅದಲ್ಲದೆ ಈ ಜಾಹೀರಾತಿನಲ್ಲಿ ಯಾವ ಸ್ಥಳಕ್ಕೆ(Location) ನೇಮಕ ಮಾಡುತ್ತಿದ್ದಾರೆ ಎಂಬ ಸ್ಪಷ್ಟ ಮಾಹಿತಿ ಇಲ್ಲದಿರುವುದು ಸ್ಥಳೀಯ ಉದ್ಯೋಗಾಂಕ್ಷಿಗಳನ್ನು ಚಿಂತೆಗೀಡು ಮಾಡಿದೆ.

ಜೊತೆಗೆ ಮಂಗಳೂರಿನಲ್ಲಿರುವ GMPL ಘಟಕಕ್ಕೆ GAIL ನ ಇತರ ಸಹ ಸಂಸ್ಥೆಗಳಿಂದ ಉದ್ಯೋಗಿಗಳನ್ನು ತರಿಸಿಕೊಳ್ಳುತ್ತಿರುವುದು ಸ್ಥಳೀಯ ಉದ್ಯೋಗಿಗಳ ಆತಂಕಕ್ಕೆ ಕಾರಣವಾಗಿದೆ.

ಈ ಬಗ್ಗೆ ಸಂತ್ರಸ್ತರು ಸ್ಥಳೀಯ ಆಡಳಿತಕ್ಕೆ ಸರಿಯಾದ ಮಾಹಿತಿ ನೀಡುವಂತೆ ಕೋರಿಕೊಂಡಿದ್ದಾರೆ.

Comments