ನೈಜ ಸ್ವಾತಂತ್ರ ಪಡೆದ MSEZ ಸಂತ್ರಸ್ತರು, ಸಂಭ್ರಮ ಪಟ್ಟು ಸಚಿವರು ಮತ್ತು ಸ್ಪೀಕರ್ ಗೆ ಸನ್ಮಾನ!!

ಮಂಗಳೂರು, ಕಳೆದೊಂದು ವರ್ಷದಿಂದ GMPL ನಲ್ಲಿ ಶಾಶ್ವತ ನೇಮಕಾತಿಗೆ ಒತ್ತಾಯಿಸಿ ಹೋರಾಟ ನಡೆಸುತ್ತಿರುವ MSEZ ನ ನಿರ್ವಸಿತ ಕುಟುಂಬಗಳಿಗೆ ಸಂಭ್ರಮದ ಸುದ್ದಿ ಒಂದು ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಬಂದೊದಗಿದೆ.ಕಾರ್ಮಿಕ ಮುಖಂಡ ಲಾರೆನ್ಸ್ ನವರ ನೇತೃತ್ವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ದಿನೇಶ್ ಗುಂಡೂರಾವ್ ಮತ್ತು ಸ್ಪೀಕರ್ ಸನ್ಮಾನ್ಯ ಯು.ಟಿ ಖಾದರ್ ಅವರನ್ನು ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಭೇಟಿಯಾಗಿ ಸನ್ಮಾನಿಸಲಾಯಿತು.

ಈ ಬಗ್ಗೆ ಮಾಹಿತಿ ನೀಡಿದ ಸಂತ್ರಸ್ತರೋರ್ವರು ಕೇಂದ್ರ ಸರಕಾರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯಿಂದ (DoPT) ಹಿರಿಯ ಅಧಿಕಾರಿಗೆ ಅಧಿಕೃತ ಮಾಹಿತಿ ಬಂದಿದ್ದು ಇನ್ನೆರಡು ದಿನಗಳಲ್ಲಿ ನೇಮಕಾತಿ ಪತ್ರ ನೀಡಲಾಗುವುದು ಎಂದು ತಿಳಿಸಿದರು.

ಇನ್ನು ಹದಿನೈದು ದಿವಸ ಉಸ್ತುವಾರಿ ಸಚಿವರಿಗೆ ಜಿಲ್ಲಾ ಪ್ರವಾಸ ಇಲ್ಲದ ಕಾರಣ ನಮ್ಮ ಸಂತೋಷವನ್ನು ಅವರ ಜೊತೆಗೆ ಇಂದೇ ಹಂಚಿ ಕೊಂಡೆವು, ತಮ್ಮ ಹಲವು ದಿನಗಳ ಸರಕಾರಿ ನೌಕರಿ ಕನಸು ನನಸು ಆದ ಸಂದರ್ಭದಲ್ಲಿ ಈಗ ನಮಗೆ ನಿಜವಾಗಲೂ ಸ್ವಾತಂತ್ರ ಸಿಕ್ಕಿದೆ ಎಂದು ಸಂತೋಷ ಪಟ್ಟರು. ಬಳಿಕ ಅಲ್ಲಿಯೇ ಸರ್ಕ್ಯೂಟ್ ಹೌಸ್ ನಲ್ಲಿ ಇದ್ದ ಸಂಸದರನ್ನು ಭೇಟಿಯಾಗಿ ಧನ್ಯವಾದ ತಿಳಿಸಿದರು.

ಸನ್ಮಾನ ನಿರಾಕರಿಸಿದ ಸಂಸದ: ಈ ಬಗ್ಗೆ ಉನ್ನತ ಮಟ್ಟದಲ್ಲಿ ಹಲವು ಬಾರಿ ಸಭೆಗಳನ್ನು ನಡೆಸಿರುವ ಸಂಸದರು, ವಿಶೇಷವಾಗಿ ಪ್ರಧಾನ ಮಂತ್ರಿ ಕಾರ್ಯಾಲಯ ತನಕ ತಲುಪಿರುವ ಇವರು, ಈ ಮಾಹಿತಿಯನ್ನು ಪುಷ್ಟಿಕರಿಸಲು ನಿರಾಕರಿಸಿದರು. ಅದು ಇನ್ನೂ ಪ್ರಕ್ರಿಯೆ ಹಂತದಲ್ಲಿ ಇದ್ದು, ಹಲವು ಕಾನೂನು ತೊಡಕುಗಳನ್ನು ಸರಿಪಡಿಸಬೇಕಾಗಿದೆ, ಅದರ ಬಗ್ಗೆ ನನ್ನ ಪ್ರಯತ್ನ ಸತತವಾಗಿ ನಡೆಯುತ್ತಿದ್ದು, ಹಾಗಾಗಿ ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸುವುದು ಸರಿಯಲ್ಲ,, ಒಮ್ಮೆ ಕಾರ್ಯರೂಪಕ್ಕೆ ಬಂದ ಮೇಲೆ ನಾನೇ ಬಂದು ನಿಮ್ಮನ್ನು ಭೇಟಿಯಾಗುತ್ತೇನೆ ಎಂದು ಹೇಳಿ ವಾಪಾಸ್ ಕಳಿಸಿದರು.

Comments