ಉಡುಪಿಗೆ ಎಂಟ್ರಿ ಕೊಟ್ಟ ಡಿಜಿಟಲ್ ಟಿವಿಯ ಲೀಡರ್!

ಉಡುಪಿ ಜಿಲ್ಲೆಯ ಡಿಜಿಟಲ್ ಮನರಂಜನೆ ಪ್ರೇಮಿಗಳಿಗೆ ಬಹು ಸಂತಸದ ಸುದ್ದಿಯೊಂದು ಹೊರಬಿದ್ದಿದೆ. ತಮ್ಮ ಉತ್ಕೃಷ್ಠ ಗುಣಮಟ್ಟದ ಸೇವೆಯ ಮೂಲಕ ಭಾರತದೆಲ್ಲೆಡೆ ಜನಪ್ರಿಯತೆ ಪಡೆದಿರುವ, ಡಿಜಿಟಲ್ ಟಿವಿ ಕ್ಷೇತ್ರದಲ್ಲಿ ದೇಶದ ನಂಬರ್ ಒನ್ ಸಂಸ್ಥೆ GTPL Hathway Limited ಇದೀಗ ತನ್ನ ಡಿಜಿಟಲ್ ಕೇಬಲ್ ಟಿವಿ, OTT ಸೇವೆಗಳನ್ನು ಉಡುಪಿ ಜಿಲ್ಲೆಯ ಜನರಿಗೆ ತಲುಪಿಸಲು ಸಜ್ಜಾಗಿದೆ.

ಭಾರತದಲ್ಲಿ ಡಿಜಿಟಲ್ ದೂರದರ್ಶನ ಸೇವೆಗಳು ಹಿಂದೆಂದಿಗಿಂತಲೂ ಸಾಕಷ್ಟು ವೇಗವಾಗಿ ಅಭಿವೃದ್ಧಿಯ ಪಥದಲ್ಲಿದೆ. ಈ ಬೆಳವಣಿಗೆಯಲ್ಲಿ ತಾವು ನೀಡೋ ಗುಣಮಟ್ಟದ ಸೇವೆಯಿಂದಾಗಿ ಪ್ರಮುಖ ನಾಯಕನಾಗಿ ಹೊರಹೊಮ್ಮಿರುವ ಸಂಸ್ಥೆಯೆಂದರೆ GTPL Hathway Limited. ಈ ಸಂಸ್ಥೆ ಎರಡು ದಶಕಗಳಿಂದ ಈ ಸೇವಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ದೇಶದಾದ್ಯಂತ ಒಂದು ಕೋಟಿಗೂ ಹೆಚ್ಚು ಕೇಬಲ್ ಕನೆಕ್ಷನ್ ಗಳನ್ನ ಒದಗಿಸಿ, ಸಂತೃಪ್ತ ಗ್ರಾಹಕರ ಬಹುದೊಡ್ಡ ಪರಿವಾರವನ್ನೇ ಹೊಂದಿರುವುದು ಈ ಸಂಸ್ಥೆಯ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ.

ಕರ್ನಾಟಕದಲ್ಲಿ ದಕ್ಷಿಣ ಕನ್ನಡ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಈಗಾಗಲೇ ಉತ್ತಮ ಗುಣಮಟ್ಟದ ಸೇವೆ ನೀಡುತ್ತಿರೋ ಈ ಸಂಸ್ಥೆ ದೇಶದ 28 ರಾಜ್ಯಗಳಲ್ಲಿ, 1500+ ಪಟ್ಟಣಗಳಲ್ಲಿ, ಸುಮಾರು 1 ಕೋಟಿಯ 20 ಲಕ್ಷ ಮನೆಗಳಲ್ಲಿ ತಮ್ಮ ಸೇವೆಗಳನ್ನು ಒದಗಿಸುತಿದ್ದು, GTPL ಪ್ಲಾಟ್‌ಫಾರ್ಮ್‌ ನಲ್ಲಿ 940+ ಚಾನೆಲ್‌ಗಳಿದ್ದು , ಇದರೊಂದಿಗೆ GTPL Genie+ ಎಂಬುದು GTPL ಕಂಪನಿಯ OTT ಪ್ಲಾಟ್‌ಫಾರ್ಮ್ ಆಗಿದ್ದು, ಇದರಲ್ಲಿ 25 ಕ್ಕೂ ಅಧಿಕ ಜನಪ್ರಿಯ OTT ಆಪ್ ಗಳು ಲಭ್ಯ ಇದೆ. ಗ್ರಾಹಕರು ನೂರಾರು ಆನ್‌ಲೈನ್ ಟಿವಿ ಚಾನೆಲ್‌ಗಳು, ಸಿನಿಮಾ, ಸೀರಿಯಲ್‌ಗಳು, ವೆಬ್‌ ಸೀರೀಸ್ ಮತ್ತು ಲೈವ್ ಶೋಗಳನ್ನು ನೇರವಾಗಿ ಒಂದೇ ಸೂರಿನಡಿ ವೀಕ್ಷಿಸಲು ಅವಕಾಶ ನೀಡುತ್ತದೆ. ಇದರ ಇನ್ನೊಂದು ವಿಶೇಷತೆ ಏನಂದ್ರೆ ಈ ಪ್ಲಾಟ್ಫಾರ್ಮ್ ನಲ್ಲಿ 500 ಕ್ಕೂ ಅಧಿಕ ಆನ್ಲೈನ್ ಗೇಮ್ಸ್ ಗಳು ಲಭ್ಯ ಇದ್ದು ಇದು ಈಗಿನ ಯುವಜನತೆಯ ಮೆಚ್ಚುಗೆಗೆ ಪಾತ್ರವಾಗಿದೆ.

ಈ ಕೇಬಲ್ ಸೇವೆ ವಿವಿಧ ಭಾಷೆಗಳಲ್ಲಿ, ವಿವಿಧ ವಿಷಯಗಳಲ್ಲಿ ವಿಶಾಲ ಆಯ್ಕೆಗಳನ್ನು ಗ್ರಾಹಕರಿಗೆ ಒದಗಿಸುತ್ತದೆ. ಗ್ರಾಹಕರು ಕನ್ನಡ, ಹಿಂದಿ, ತೆಲುಗು, ಮಲಯಾಳಂ ಮತ್ತಿತರ ಸ್ಥಳೀಯ ಭಾಷೆಗಳಲ್ಲಿ ಚಿತ್ರ ಹಾಗೂ ಮನರಂಜನೆ ಪಡೆಯಬಹುದಾಗಿದೆ. ಈ ಸಂಸ್ಥೆ 95+ HD ಚಾನೆಲ್‌ಗಳನ್ನು ನೀಡುತ್ತಿದ್ದು, ಪ್ರಾದೇಶಿಕ ಭಾಷಾ ಪ್ಯಾಕೇಜ್‌ಗಳು ಹಾಗೂ ಪ್ರೋತ್ಸಾಹಕಾರಿ ದರದಲ್ಲಿ ಪ್ರೀಮಿಯಂ ಒದಗಿಸುತ್ತಿರೋದ್ರಿಂದ ಎಲ್ಲಾ ವರ್ಗದ ಜನರನ್ನು ಅತೀ ವೇಗವಾಗಿ ತಲುಪುತ್ತಿದೆ.

ಈ ಸಂಸ್ಥೆಯು ಕ್ಲೌಡ್ ಆಧಾರಿತ ಟಿವಿ ವೀಕ್ಷಣೆ ತಂತ್ರಜ್ಞಾನವನ್ನು ಸಹ ಹೊಂದಿದ್ದು, ಇದರ ಮೂಲಕ ಗ್ರಾಹಕರು ಟಿವಿ ಚಾನೆಲ್‌ಗಳು, ಸಿನೆಮಾಗಳು, ಸೀರಿಯಲ್‌ಗಳು ಮತ್ತು ವೆಬ್ ಸೀರೀಸ್‌ಗಳನ್ನು ಕ್ಲೌಡ್ ಸರ್ವರ್‌ಗಳಿಂದ ನೇರವಾಗಿ ಸ್ಟ್ರೀಮ್ ಮಾಡಬಹುದು. ಸೆಟ್ ಆಪ್ ಬಾಕ್ಸ್ ಇಲ್ಲದೆ ನೇರವಾಗಿ ವೀಕ್ಷಣೆ ಮಾಡುವಂತಹ ಈ ಸೇವೆ ಸ್ಯಾಮ್ಸಂಗ್ ಹಾಗೂ ಎಲ್.ಜಿ ಟಿವಿಗಳಲ್ಲಿ ಲಭ್ಯವಿದೆ.

ಸದ್ಯದಲ್ಲಿಯೇ ಈ ಸಂಸ್ಥೆ HITS ಸೇವೆಯನ್ನು ವಿಸ್ತರಣೆ ಮಾಡುವ ಉದ್ದೇಶ ಹೊಂದಿದೆ. HITS ಎಂಬದು "Headend-In-The-Sky" ಎಂಬ ಪದದ ಸಂಕ್ಷಿಪ್ತ ರೂಪವಾಗಿದೆ. ಇದು ಡಿಜಿಟಲ್ ಕೇಬಲ್ ಟಿವಿಗೆ ಸಾಟ್‌ಲೈಟ್ ಮೂಲಕ ಚಾನೆಲ್‌ಗಳನ್ನು ಪ್ರಸಾರ ಮಾಡುವ ತಂತ್ರಜ್ಞಾನವಾಗಿದೆ. ಇದರ ಮೂಲಕ ಕೇಬಲ್ ಆಪರೇಟರ್‌ಗಳು ಗ್ರಾಹಕರಿಗೆ ಗುಣಮಟ್ಟದ ಟಿವಿ ಚಾನೆಲ್‌ಗಳನ್ನು ತಲುಪಿಸಬಹುದಾಗಿದೆ.

ಇನ್ನೇಕೆ ತಡ ಮಾಡ್ತಿದ್ದೀರಿ? GTPL ಸೇವೆ ಈಗ ಉಡುಪಿ ಜಿಲ್ಲೆಯ ಹಲವು ಗ್ರಾಮ ಮತ್ತು ಪಟ್ಟಣಗಳಲ್ಲಿ ಆರಂಭವಾಗುತ್ತಿದ್ದು ರಿಜಿಸ್ಟರ್ ಆಗಲು ನಿಮ್ಮ ಸ್ಥಳೀಯ GTPL ಕೇಬಲ್ ಆಪರೇಟರ್ ಅನ್ನು ಈ ಕೂಡಲೇ ಸಂಪರ್ಕಿಸಿ ಅಥವಾ ಭೇಟಿ ನೀಡಿ.

Comments