ಕುಡುಕರ ಆತ್ಮಹತ್ಯೆ ಹೆಚ್ಚಳ ಹಿನ್ನೆಲೆ ಮದ್ಯ ಸರಬರಾಜಿಗೆ ಸರ್ಕಾರ ಆದೇಶ !

ಕೊರೋನಾ ವೈರಸ್ ಹರಡದಂತೆ ಕೇಂದ್ರ ಸರ್ಕಾರ 21 ದಿನಗಳ ಲಾಕ್ ಡೌನ್ ಗೆ ಆದೇಶಿಸಿದ್ದು ಈ ಹಿನ್ನೆಲೆಯಲ್ಲಿ ಮದ್ಯ ಮಾರಾಟ ಸ್ಥಗಿತಗೊಂಡಿದೆ. ಆದರೆ ಮದ್ಯಕ್ಕೆ ದಾಸರಾಗಿರುವವರು ಮಾತ್ರ ತಮಗೆ ಮದ್ಯ ಬೇಕೇ ಬೇಕು ಎಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಸರ್ಕಾರ ಇದೀಗ ಎಚ್ಚೇತ್ತಿದೆ. ತಮಗೆ ಮದ್ಯ ಬೇಕು ಎಂದು ಹಲವರು ವಿಡಿಯೋ ಮಾಡಿ ಕಳುಹಿಸುತ್ತಿದ್ದಾರೆ. ಇದರ ಜೊತೆಗೆ ಮದ್ಯ ಸಿಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆಯನ್ನು ಸಹ ಹಾಕುತ್ತಿದ್ದಾರೆ. ಇನ್ನು ಕುಡುಕರ ಆತ್ಮಹತ್ಯೆ ಹೆಚ್ಚಳವಾದ ಹಿನ್ನಲೆಯಲ್ಲಿ ಕೇರಳ ಸರ್ಕಾರ ಮದ್ಯ ಸರಬರಾಜಿಗೆ ಆದೇಶಿಸಿದೆ. ಇನ್ನು ಕರ್ನಾಟಕ ರಾಜ್ಯದಲ್ಲೂ ಮದ್ಯ ಮಾರಾಟಕ್ಕೆ ಆಗ್ರಹಿಸಿ 5ಕ್ಕೂ ಹೆಚ್ಚು ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Comments