ಹಾಸನ ಸುತ್ತಲಿನ ಜಿಲ್ಲೆಯಲ್ಲಿ ಪಾಸಿಟಿವ್ ಕೇಸ್ ಇರುವುದರಿಂದ, ಹಾಸನದ ಸುತ್ತ ಎಲ್ಲ ಕಡೆ ಸಂಪರ್ಕ ಕಡಿತ ಮಾಡಲು ಕಟ್ಟುನಿಟ್ಟಾಗಿ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹಾಸನದಲ್ಲಿ ಸಚಿವ ಮಾಧುಸ್ವಾಮಿ ಹೇಳಿದ್ದಾರೆ.ಇಂದು ನಗರದಲ್ಲಿ ಮಾತನಾಡಿದ ಅವರು, ಜನ ಎಷ್ಟು ಹೇಳಿದರೂ ರಸ್ತೆಯಲ್ಲಿ ಓಡಾಡುತ್ತಿದ್ದಾರೆ. ಹೀಗಾಗಿ ಮಧ್ಯಾಹ್ನ ಎರಡು ಗಂಟೆಯವರೆಗೆ ಮಾತ್ರ ಶಾಪ್‍ಗಳನ್ನು ಓಪನ್ ನಂತರ ಕ್ಲೋಸ್ ಮಾಡಿಸಲಾಗುವುದು. ಮೆಡಿಕಲ್ ಸ್ಟೋರ್ ಮತ್ತು ಅಗತ್ಯ ವಸ್ತು ಬಿಟ್ಟು ಎಲ್ಲವನ್ನೂ ಕಡ್ಡಾಯವಾಗಿ ಕ್ಲೋಸ್ ಮಾಡಬೇಕು ಎಂದು ನಿರ್ಧಾರ ತೆಗೆದುಕೊಳ್ಳಲಾಗಿದೆ. ಹಾಸನ ಮಾರುಕಟ್ಟೆಯನ್ನು ಮೈದಾನಗಳಿಗೆ ಶಿಫ್ಟ್ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಇನ್ನು ಮದ್ಯದಂಗಡಿಗಳ ಸ್ಟಾಕ್ ಮೇಲೆ ನಿಗಾ ಇಡಲಾಗಿದ್ದು, ರೀ ಓಪನ್ ಆದಾಗ ಸ್ಟಾಕ್ ಪ್ರಮಾಣ ಈಗ ಇರುವ ಸ್ಟಾಕ್‍ಗೆ ಹೋಲಿಕೆ ಆಗಬೇಕು. ಇಲ್ಲದಿದ್ದರೆ ಮದ್ಯದಂಗಡಿಗಳ ಲೈಸೆನ್ಸ್ ರದ್ದುಪಡಿಸುವುದಾಗಿ ಸಚಿವರು ಎಚ್ಚರಿಕೆ ನೀಡಿದರು.

Comments
Post a Comment