ಸಮೋಸ ಬೇಕೆಂದು ಜಿಲ್ಲಾಧಿಕಾರಿಗೆ ಪದೇ ಪದೇ ಕಾಲ್ ಮಾಡುತ್ತಿದ್ದ ಯುವಕ! ಆಮೇಲೆನಾಯ್ತು ನೋಡಿ!

ಉತ್ತರ ಪ್ರದೇಶದ ರಾಂಪುರದ 21 ವರ್ಷದ ಯುವಕನೊಬ್ಬ ಜಿಲ್ಲಾಧಿಕಾರಿಯವರ ಕಂಟ್ರೋಲ್ ರೂಮ್ ಗೆ ಪದೇ ಪದೇ ಕಾಲ್ ಮಾಡಿ ತನ್ನ ಮನೆಗೆ ಸಮೋಸ ತಂದು ಕೊಡುವಂತೆ ವಿನಂತಿಸಿದ್ದು, ಈತನಿಗೆ ಹಲವಾರು ಬಾರಿ ಎಚ್ಚರಿಕ್ರ್ ನೀಡಿದ್ದರೂ ಸಹ ಆತನ ಬುದ್ದಿ ಬದಲಾಗದ ಕಾರಣ ಜಿಲ್ಲಾಧಿಕಾರಿ ಯುವಕನಿಗೆ ನೀಡಿರತಕ್ಕಂತಹ ಶಿಕ್ಷೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಇಲ್ಲಿನ ಜಿಲ್ಲಾಧಿಕಾರಿ ಕರೆ ಮಾಡಿ ಪದೇ ಪದೇ ಕಾಟ ಕೊಡುತ್ತಿದ್ದ ಯುವಕನಿಗೆ ಕೊನೆಗೂ ನಾಲ್ಕು ಸಮೋಸ ತಂದುಕೊಟ್ಟಿದ್ದಾರೆ. ಯುವಕ ಸಮೋಸ ತಿಂದಾದ ಬಳಿಕ ಗಡದ್ದಾದ ಶಿಕ್ಷೆಯೊಂದನ್ನು ವಿಧಿಸಿದ್ದಾರೆ. ಆ ಯುವಕನಿಗೆ ಒಂದು ದಿನ ಊರಿನ ಚರಂಡಿ ಸ್ವಚ್ಛ ಮಾಡುವಂತೆ ಕೆಲಸ ನೀಡಿದ್ದು, ಈ ವಿಚಾರ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.

Comments