ನಿಜಾಮುದ್ದಿನ್ ಸಭೆಯಲ್ಲಿ ಭಾಗಿಯಾಗಿದ್ದ 10 ಧರ್ಮ ಗುರುಗಳು ಬೆಳಗಾವಿಯಲ್ಲಿ !

ಕೊರೊನಾ ಶಂಕಿತರಿದ್ದರೂ ಒಂದೂ ಪಾಸಿಟಿವ್ ಕೇಸ್ ಬರದೇ ನಿರಾತಂಕವಾಗಿದ್ದ ಕುಂದಾನಗರಿ ಜನತೆ ಬೆಚ್ಚಿಬೀಳುವ ನ್ಯೂಸ್ ಒಂದು ಹೊರಬಿದ್ದಿದೆ. ದೆಹಲಿಯಲ್ಲಿ ನಡೆದಿದ್ದ ಮುಜಾಹಿದ್ದೀನ್ ಸಭೆಯಲ್ಲಿ ಭಾಗಿಯಾಗಿದ್ದ 10 ಧರ್ಮಗುರುಗಳು ಬೆಳಗಾವಿಯಲ್ಲಿದ್ದಾರೆಂಬ ಸುದ್ದಿ ಬೆಳಗಾವಿಗರ ನಿದ್ದಗೆಡಿಸಿದೆ.ದೆಹಲಿ ನಿಜಾಮುದ್ದಿನ ಸಭೆಯಲ್ಲಿ ಭಾಗಿಯಾಗಿದ್ದ ಇಂಡೋನೇಷ್ಯಾ ಮೂಲದ 10 ಧರ್ಮ ಗುರುಗಳು ಬೆಳಗಾವಿಯಲ್ಲಿದ್ದು, ಬೆಳಗಾವಿಯಿಂದ ದೆಹಲಿ ನಿಜಾಮುದ್ದಿನ ಸಭೆಯಲ್ಲಿ ಭಾಗಿಯಾಗಿದ್ದಾರೆ. ಇದರಲ್ಲಿ 12 ಜನರ ಪೈಕಿ 10 ಜನ ಇಂಡೋನೇಷ್ಯಾ ಮೂಲದವರು ಎನ್ನಲಾಗಿದೆ.ಇನ್ನು ಈಗಾಗಲೇ ಜಿಲ್ಲಾಡಳಿತ 10 ಜನರ ಪಾಸಪೋರ್ಟ್ ವಶಕ್ಕೆ ಪಡೆದಿದ್ದು, ಮೊದಲೇ ಸುದ್ದಿ ತಿಳಿದಿದ್ದ ಜಿಲ್ಲಾಡಳಿತ ಮಾರ್ಚ್ 16ರಿಂದಲೇ ಬೆಳಗಾವಿಯ ಮಸೀದಿಯೊಂದರಲ್ಲಿ ಇಂಡೋನೇಷ್ಯಾ ಮೂಲದ 10 ಜನರಿಗೆ ಕ್ವಾರೆಂಟೈನ್ ಮಾಡಿದ್ದಾರೆ. ಈಗಾಗಲೇ ಅವರೆಲ್ಲ ಕ್ವಾರಂಟೈನ್ ಆಗಿ 14 ದಿನಗಳೆದರೂ, ಮತ್ತೊಮ್ಮೆ ಕ್ವಾರಂಟೈನ್‌ನಲ್ಲಿರಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಅಲ್ಲದೇ, ಮತ್ತಿಬ್ಬರು ಕಣ್ಮರೆಯಾಗಿದ್ದು, ಅವರನ್ನ ಹುಡುಕಲಾಗುತ್ತಿದೆ.

Comments