ಬೆಂಗಳೂರಿನ ಪಾದರಾಯನಪುರದ ಸುಬಾನಿ ಮಸೀದಿಯಲ್ಲಿ ಅಡಗಿ ಕುಳಿತ 19 ವಿದೇಶಿ ಧರ್ಮ ಪ್ರಚಾರಕರು

ಬೆಂಗಳೂರಿನ ಪಾದರಾಯನಪುರ ಪ್ರಕರಣಕ್ಕೆ ಸಂಬಂಧಿಸಿ ಈವರೆಗೆ 119 ಮಂದಿಯನ್ನು ಬಂಧಿಸಲಾಗಿದ್ದು ಬಂಧಿತರ ವಿರುದ್ಧ ರಾಷ್ಟ್ರೀಯ ವಿಪತ್ತು ಕಾರ್ಯನಿರ್ವಹಣಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ರಾಮನಗರ ಜಿಲ್ಲಾ ಕಾರಾಗೃಹಕ್ಕೆಸ್ಥಳಾಂತರ ಮಾಡಲಾಗಿದೆ. ಇದೀಗ ಬಂದ ಸುದ್ದಿಯ ಪ್ರಕಾರ ದೆಹಲಿಯ ತಬ್ಲಿಘಿ ಸಮಾವೇಶದಲ್ಲಿ ಸಮಾವೇಶದಲ್ಲಿ ಭಾಗವಹಿಸಿ ತಲೆಮರೆಸಿಕೊಂಡ ವಿದೇಶಿ  ತಬ್ಲಿಘಿ ಗಳು  ಪಾದರಾಯನಪುರದ ಸುಬಾನಿ ಮಸೀದಿಯಲ್ಲಿ ಅಡಗಿ ಕುಳಿತದ್ದು ಪತ್ತೆಯಾಗಿದೆ .

ಈ ಪೈಕಿ ನಾಲ್ಕು ಅಕ್ರಮ ವಿದೇಶಿಗರನ್ನು ಮಾತ್ರ ಪತ್ತೆ ಮಾಡಲಾಗಿದ್ದು ಉಳಿದವರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ . ಇಂಡೋನೇಷಿಯಾ ಕಿರ್ಗಿಸ್ತಾನ್ ಮುಂತಾದ ದೇಶಗಳಿಂದ ಆಗಮಿಸಿದ 19ವಿದೇಶಿ  ತಬ್ಲಿಘಿ ಗಳ ವಿರುದ್ಧ ಜೆಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಯುತ್ತಿದ್ದು ಶಾಸಕ ಜಮೀರ್ ಅಹಮದ್ ಕಾರ್ಪೊರೇಟರ್ ಇಮ್ರಾನ್ ಪಾಷ ರಿಂದ ಈ ಧರ್ಮ ಪ್ರಚಾರಕರನ್ನು ಅಡಗಿಸುವ ಕೆಲಸವಾಗಿದೆ ಎಂಬ ಆರೋಪ ಕೂಡ ಕೇಳಿ ಬಂದಿದೆ .

ಈ ಕಾರಣದಿಂದಲೇ ಪಾದರಾಯನಪುರದಲ್ಲಿ ಕೆ ಎಫ್ ಡಿ ಸಂಘಟನೆಯ ಕುಮ್ಮಕ್ಕಿನಿಂದ ವೈದ್ಯರು ಮತ್ತು ಪೊಲೀಸ್ ಸಿಬ್ಬಂದಿ ಮೇಲೆ ದಾಳಿ ನಡೆಸಲಾಗಿತ್ತು ಎಂದು ಹೇಳಲಾಗಿದೆ .ಪಾದರಾಯನಪುರ ಘಟನೆಗೆ ಸಂಬಂಧಿಸಿ ತನಿಖೆಯಿಂದ ದಿನದಿಂದ ದಿನಕ್ಕೆ ಒಂದೊಂದು ಮಾಹಿತಿ ಹೊರಬೀಳುತ್ತಿದೆ.

Comments