ಕೋವಿಡ್ -19 ಸಾಂಕ್ರಾಮಿಕ ರೋಗ ಹಿನ್ನಲೆ :ಧ್ವನಿವರ್ಧಕಗಳ ಮೂಲಕ ನಮಾಜನ್ನು ನಿಷೇಧಿಸಿದ ಬಿಎಸ್ವೈ ಸರ್ಕಾರ

ಬೆಂಗಳೂರು : ಕೋವಿಡ್ -19 ಸಾಂಕ್ರಾಮಿಕ ರೋಗ ಹಿನ್ನೆಲೆಯಲ್ಲಿ ಸಾಮೂಹಿಕ ಪ್ರಾರ್ಥನೆ ಸೇರಿ ಜನ ಗುಂಪುಗೂಡುವುದನ್ನು ಕರ್ನಾಟಕ ಸರ್ಕಾರ ನಿಷೇಧಿಸಿದ ಬೆನ್ನಲ್ಲೇ ಗುರುವಾರ ರಾಜ್ಯ ಸರ್ಕಾರ ಹೊರಡಿಸಿದ ಆದೇಶದಲ್ಲಿ ಮಸೀದಿಯಲ್ಲಿ ಐದು ಬಾರಿ ನಡೆಯುವ ನಮಾಜಿನ ಮೇಲೆ ನಿಷೇಧ ಹೇರಿದೆ. ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ಗಮನದಲ್ಲಿಟ್ಟುಕೊಂಡು ಈ ಆದೇಶ ಹೊರಡಿಸಲಾಗಿದೆ ಎಂದು ಟೈಮ್ಸ್ ನೌ ವರದಿ ಮಾಡಿದೆ .ಪ್ರಮುಖವಾಗಿ ಪವಿತ್ರ ರಂಜಾನ್ ತಿಂಗಳಲ್ಲಿ ಮಸೀದಿ ದರ್ಗಾಗಳಲ್ಲಿ ಐದು ಬಾರಿ ಸಭೆಯ ಪ್ರಾರ್ಥನೆಯನ್ನು ನಡೆಸುತ್ತಾರೆ ಈ ಪ್ರಾರ್ಥನೆ ಮೇಲೆ ಸರ್ಕಾರ ಗುರುವಾರ ನಿಷೇಧ ಹೇರಿದೆ .ಅಲ್ಲದೆ ಏಪ್ರಿಲ್ 23 - ಮೇ 23 ರ ವರೆಗೆ ಮಸೀದಿಯಲ್ಲಿ ಸಿಬ್ಬಂದಿ ಧ್ವನಿವರ್ಧಕಗಳ ಮೂಲಕ ನಮಾಜ್ ಮಾಡುವುದನ್ನು ಕೂಡ ನಿಷೇಧಿಸಲಾಗಿದೆ ಸಾರ್ವಜನಿಕರಿಗೆ ಮಸೀದಿಯಲ್ಲಿ ಐದು ಬಾರಿ ಸಭೆ ಗೂಡಿ ಪ್ರಾರ್ಥನೆ ಮಾಡಲು ಅವಕಾಶ ನೀಡಬಾರದು ಎಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಕಲ್ಯಾಣ ವಕ್ಫ್ ಮತ್ತು ಹಜ್ ಇಲಾಖೆ ಗುರುವಾರ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

Comments