66 ಕೋಟಿ ತ್ರಿಪಲ್ ಲೇಯರ್ ಮಾಸ್ಕ್ ತಯಾರಿಸಿ ಉಚಿತವಾಗಿ ಬಡವರಿಗೆ ಹಂಚಲು ಆದೇಶ ನೀಡಿದ ಯೋಗಿ ಆದಿತ್ಯನಾಥ್

ಉತ್ತರ ಪ್ರದೇಶದಲ್ಲಿ ಕೊರೊನ ವೈರಸ್ ನಿಯಂತ್ರಣಕ್ಕೆ ಯೋಗಿ ಸರ್ಕಾರ ಪ್ರಯತ್ನ ಪಡುತ್ತಿದ್ದು ಅನೇಕ ಕಡೆ ಲಾಕ್ ಡೌನ್ ಆದೇಶವನ್ನು ಜನ ಉಲ್ಲಂಘಿಸುತ್ತಿದ್ದಾರೆ .ಇಂಥವರ ವಿರುದ್ಧ ಪ್ರಕರಣ ದಾಖಲಿಸಿ ಮನೆಮನೆಗೆ ತೆರಳಿ ಎಫ್ಐಆರ್ ಪ್ರತಿ ನೀಡುವ ಕೆಲಸವನ್ನು ಪೊಲೀಸರು ಮಾಡುತ್ತಿದ್ದು .ಇತ್ತ ಯೋಗಿ ಸರ್ಕಾರ ಉತ್ತರ ಪ್ರದೇಶದಲ್ಲಿ ಬಡವರಿಗೆ ಉಚಿತವಾದ ತ್ರಿಪಲ್ ಲೇಯರ್ ಮಾಸ್ಕ್ ವಿತರಿಸಲು ಆದೇಶ ನೀಡಿದ್ದು ಈ ನಿಟ್ಟಿನಲ್ಲಿ ಖಾದಿಯಿಂದ 66 ಕೋಟಿ ತ್ರಿಪಲ್ ಲೇಯರ್ ಮಾಸ್ಕ್ ಅನ್ನು ತಯಾರಿಸಲು ಸೂಚನೆ ನೀಡಿದ್ದು, ಈ ಮಾಸ್ಕ್ಗಳು ಮರು ಬಳಕೆ ಮಾಡಬಹುದಾಗಿದೆ ಬಡವರು ಈ ಮಾಸ್ಕ್ ಅನ್ನು ಉಚಿತವಾಗಿ ಪಡೆಯಲಿದ್ದಾರೆ. ಉಳಿದರೆ ಅತಿ ಕಡಿಮೆ ದರದಲ್ಲಿ ಮಾರುಕಟ್ಟೆಯಲ್ಲಿ ನೀಡಲಾಗುವುದು ಎಂದು ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ.

Comments