ವಿಶ್ವ ಆರೋಗ್ಯ ಸಂಸ್ಥೆಯ ಮರು ರಚನೆಗೆ ಪಟ್ಟು ಹಿಡಿದ ಭಾರತದ ಬೆಂಬಲ ಸೂಚಿಸಿದ ಆಸ್ಟ್ರೇಲಿಯಾ

ಜಗತ್ತಿನಾದ್ಯಂತ ಹರಡುತ್ತಿರುವ ಕೊರೊನ ವೈರಸ್ ಅಟ್ಟಹಾಸ ಮುಗಿದ   ಬಳಿಕ ವಿಶ್ವ ಆರೋಗ್ಯ ಸಂಸ್ಥೆ(who)ಯನ್ನು ಮರುರಚಿಸಬೇಕು ಎಂಬ ಭಾರತದ ವಾದಕ್ಕೆ ಆಸ್ಟ್ರೇಲಿಯಾ ಬೆಂಬಲ ವ್ಯಕ್ತಪಡಿಸಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಡಬ್ಲ್ಯೂಎಚ್ಒ ಅನ್ನು ಮರುರಚಿಸಬೇಕು ಎಂದು ಜಿ20 ರಾಷ್ಟ್ರಗಳ ನಾಯಕರ ವರ್ಚುಯಲ್ ಸಭೆಯಲ್ಲಿ ಆಗ್ರಹಿಸಿದ್ದರು. ಇದಕ್ಕೆ ಆಸ್ಟ್ರೇಲಿಯಾ ಸರ್ಕಾರದ ಬೆಂಬಲವಿದೆ ಎಂದು ಭಾರತದಲ್ಲಿರುವ ಆಸ್ಟ್ರೇಲಿಯಾದ ನಿಯೋಜಿತ ರಾಯಭಾರಿ ಬ್ಯಾರಿ ಓ ಫೆರಲ್ ಹೇಳಿದ್ದರು.

ಜಗತ್ತನ್ನೇ ಆವರಿಸಿರುವ ಮಹಾಮಾರಿ ಕೊರೋನಾ ಪರಿಸ್ಥಿತಿಯನ್ನು ಡಬ್ಲ್ಯೂಎಚ್ಒ ನಿಭಾಯಿಸಿದ ಕುರಿತು ಸ್ವತಂತ್ರ ತನಿಖೆ ನಡೆಸಬೇಕು ಎಂಬುದು ಆಸ್ಟ್ರೇಲಿಯಾದ ಅಭಿಪ್ರಾಯವಾಗಿದೆ. ಆದರೆ ಸದ್ಯ ಇದು ಸಾಧ್ಯವಿಲ್ಲ. ಕೋವಿಡ್ ಬಳಿಕ ಈ ಬಗ್ಗೆ ನಿರ್ಧಾರಕೈಗೊಳ್ಳುವುದಾಗಿ ಹೇಳಿದ್ದಾರೆ. 

ಡಬ್ಲ್ಯೂಎಚ್ಒ ಚೀನಾ ಅಣತಿಯಂತೆ ನಡೆಯುತ್ತಿದೆ ಎಂದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಕಿಡಿಕಾರಿ  ಡಬ್ಲ್ಯೂಎಚ್ಒ ಗೆ ನೀಡುತಿದ್ದ ಆರ್ಥಿಕ ಸಹಾಯವನ್ನು ಕಡಿತಗೊಳಿಸಿದ್ದರು ನಂತರದ ಬೆಳವಣಿಗೆಯಲ್ಲಿ ಚೀನಾ  ಡಬ್ಲ್ಯೂಎಚ್ಒ ಗೆ ಆರ್ಥಿಕ ಸಹಾಯ ಮಾಡುದಾಗಿ ಒಪ್ಪಿಕೊಂಡು ಹಣವನ್ನು ಬಿಡುಗಡೆ ಮಾಡಿತ್ತು ,ಸದ್ಯ ಕೊರೊನ ಮಹಾ ಮಾರಿ ಕುರಿತು  ಡಬ್ಲ್ಯೂಎಚ್ಒ ನಡೆದುಕೊಳ್ಳುವ ರೀತಿ ಹಲವು ರಾಷ್ಟ್ರಗಳ ಕೆಂಗಣ್ಣಿಗೆ ಗುರಿಯಾಗಿದೆ.

Comments