ತಬ್ಲೀಘಿ ಗಳಿಂದ ದೇಶದ 23 ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೋಂಕು ಹರಡಿದೆ ಎಂದ ಕೇಂದ್ರ

ಕೊರೊನ ವಿರುದ್ಧ ಕೇಂದ್ರ ಸರ್ಕಾರ ನಿರ್ಣಾಯಕ ಕ್ರಮಗಳನ್ನು ಕೈಗೊಂಡಿದ್ದರೂ ಹರಡುವಿಕೆ ಮಾತ್ರ ಕಡಿಮೆಯಾಗುತ್ತಿಲ್ಲ. ಇನ್ನು ಕಳೆದ 24 ಗಂಟೆಯಲ್ಲಿ 43 ಮಂದಿ ಬಲಿಯಾಗಿದ್ದು ಹೊಸದಾಗಿ 991 ಪ್ರಕರಣಗಳು ದಾಖಲಾಗಿವೆ. ಇನ್ನು ದೇಶದಲ್ಲಿ ಸಾವಿನ ಸಂಖ್ಯೆ 488ಕ್ಕೇರಿಕೆಯಾಗಿದೆ. ಭಾರತದಲ್ಲಿ ಒಟ್ಟಾರೆ 14,378 ಮಂದಿ ಸೋಂಕಿಗೆ ತುತ್ತಾಗಿದ್ದಾರೆ. ಈ ಪೈಕಿ ಮಹಾಮಾರಿಯಿಂದ 1992ಮಂದಿ ಚೇತರಿಸಿಕೊಂಡಿದ್ದಾರೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.ಒಟ್ಟು 14378 ಪ್ರಕರಣಗಳಲ್ಲಿ, 4291 (29.8%) ಪ್ರಕರಣಗಳು ನಿಜಾಮುದ್ದೀನ್ ಮರ್ಕಜ್ ಗೆ ಸಂಬಂಧಪಟ್ಟಿದೆ. ತಬ್ಲೀಘಿ ಗಳಿಂದ ದೇಶದ 23 ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೋಂಕು ಹರಡಿದೆ . ತಮಿಳುನಾಡಿನಲ್ಲಿ 84%, ದೆಹಲಿಯಲ್ಲಿ 63%, ತೆಲಂಗಾಣದಲ್ಲಿ 79%, ಯುಪಿಯಲ್ಲಿ 59% ಮತ್ತು ಆಂಧ್ರಪ್ರದೇಶದಲ್ಲಿ 61% ಪ್ರಕರಣಗಳು ಸಂಬಂಧಪಟ್ಟಿದೆ ಎಂದು ಕೇಂದ್ರ ಸ್ಪಷ್ಟ ಪಡಿಸಿದೆ .

Comments