ಚೀನಾದಿಂದ ಆರಂಭಗೊಂಡ ಕೊರೊನಾ ವೈರಸ್ ಪ್ರಪಂಚದ ಎಲ್ಲೆಡೆ ಹಬ್ಬಿದೆ. ಅಮೆರಿಕದಲ್ಲಿ ಇದೀಗ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಪರಿಸ್ಥಿತಿ ಹದೆಗೆಟ್ಟಿದೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿರುವ ಅಮೆರಿಕನ್ನರು ತಾಯ್ನಾಡಿಗೆ ಮರಳಲು ಹಿಂದೇಟು ಹಾಕುತ್ತಿದ್ದಾರೆ ಎಂದು ವರದಿ ಆಗಿದೆ.ಅಮೆರಿಕದಲ್ಲಿ ಇದುವರೆಗೆ 5,59,409 ಮಂದಿಗೆ ಸೋಂಕು ತಗುಲಿದ್ದು, 22,071 ಮಂದಿ ಸಾವಿಗೆ ಶರಣಾಗಿದ್ದಾರೆ. ಕೊರೊನಾ ವೈರಸ್ ಸೋಂಕು ಚೀನಾದಲ್ಲಿ ಆರಂಭವಾದರೂ ಈಗ ಅಮೆರಿಕ ಅತಿ ಹೆಚ್ಚಿನ ತೊಂದರೆಯನ್ನು ಎದುರಿಸುತ್ತಿದೆ.
ಇದೇ ಕಾರಣಕ್ಕಾಗಿ ಅಮೆರಿಕದಲ್ಲಿ ಪರಿಸ್ಥಿತಿ ನಿಯಂತ್ರಣ ಮೀರಿದೆ. ಇನ್ನೊಂದೆಡೆ ಭಾರತದಲ್ಲಿರುವ ಅಮೆರಿಕನ್ನರು ತಾಯ್ನಾಡಿಗೆ ಮರಳುವ ಬದಲು ಭಾರತದಲ್ಲೇ ಉಳಿದುಕೊಳ್ಳಲು ಬಯಸಿದ್ದಾರೆ.ವಿವಿಧ ರಾಷ್ಟ್ರಗಳಲ್ಲಿ ಸಿಕ್ಕಿ ಹಾಕಿಕೊಂಡಿರುವ ಅಮೆರಿಕದ ಪ್ರಜೆಗಳನ್ನು ಸ್ವದೇಶಕ್ಕೆ ಮರಳಿಸಲು ಅಮೆರಿಕ ವಿಶೇಷ ಚಾರ್ಟರ್ಡ್ ವಿಮಾನ ಸೇವೆಯನ್ನು ಏರ್ಪಡಿಸಲಾಗಿತ್ತು. ಆದರೆ ಸದ್ಯ ಅಲ್ಲಿನ ಪರಿಸ್ಥಿತಿ ಹದೆಗೆಟ್ಟಿರುವ ಹಿನ್ನೆಲೆಯಲ್ಲಿ ಭಾರತದಲ್ಲಿರುವ ಅಮೆರಿಕರನ್ನರು ಸ್ವದೇಶಕ್ಕೆ ಮರಳಲು ಆಸಕ್ತಿ ತೋರಿಸುತ್ತಿಲ್ಲ ಎಂದು ಯುಎಸ್ ಸ್ಟೇಟ್ ಡಿಪಾರ್ಟ್‌ಮೆಂಟ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಯುಎಸ್ ಸ್ಟೇಟ್ ಡಿಪಾರ್ಟ್‌ಮೆಂಟ್ ಅಧಿಕಾರಿಯಾಗಿರುವ ಇಯಾನ್ ಬ್ರೌನ್ಲೀ, "ವಾರಂತ್ಯದಲ್ಲಿ ಭಾರತದಲ್ಲಿರುವ 800ರಷ್ಟು ಅಮೆರಿಕ ಪ್ರಜೆಗಳಲ್ಲಿ ದೂರವಾಣಿ ಸಂಪರ್ಕದ ಮೂಲಕ ಸ್ವದೇಶಕ್ಕೆ ಮರಳುವ ಬಗ್ಗೆ ಪ್ರಶ್ನೆಯನ್ನು ಕೇಳಲಾಗಿತ್ತು. ಆದರೆ 10 ಮಂದಿ ಮಾತ್ರ ಧನಾತ್ಮಕವಾಗಿ ಪ್ರತಿಕ್ರಿಯಿಸಿದ್ದರು. ಹಾಗಾಗಿ ಅನಿಶ್ಚಿತತೆ ಮುಂದುವರಿದಿದೆ" ಎಂದವರು ಹೇಳಿದರು.

extend their visas until conditions settle to normal on either side.
ReplyDelete