ಚೈನಾದಿಂದ ಆರಂಭಗೊಂಡ ಕೋರನ ವೈರಸ್ ಪ್ರಪಂಚದ ಹಲವೆಡೆ ಹರಡುತ್ತಿದೆ .ಜಗತ್ತಿನ ವಿವಿಧ ದೇಶಗಳು ಕೊರೊನಾ ವನ್ನು ನಿಯಂತ್ರಿಸಲು ಶ್ರಮಿಸುತ್ತಿದೆ. ಇದಕ್ಕೆ ಬೇಕಾದ ವೈದ್ಯಕೀಯ ಪರಿಕರಗಳ ಕೊರತೆಯನ್ನು ಹಲವು ದೇಶಗಳು ಎದುರಿಸಿದ್ದು ಪ್ರಮುಖವಾಗಿ ಕೊರೊನಾ ವೈರಸ್ ಶ್ವಾಸಕೋಶದ ಮೇಲೆ ಪ್ರಭಾವ ಬೀರುವುದರಿಂದ ಕೃತಕ ಉಸಿರಾಟಕ್ಕೆ ವೆಂಟಿಲೇಟರ್ನ ಅವಶ್ಯಕತೆ ಇದೆ .ಕೃತಕ ವೆಂಟಿಲೇಟರ್ಗಳ ಕೊರತೆಯನ್ನು ನಿವಾರಿಸಲು ದೇಶಗಳು ಪರದಾಡುತ್ತಿರುವ ನಡುವೆ ಬೆಲ್ಜಿಯಂನಲ್ಲಿ ಕೋರನ ಸೋಂಕಿಗೆ ಒಳಗಾಗಿ ತೊಂಬತ್ತು ವರ್ಷದ ವೃದ್ಧೆಯೊಬ್ಬರು ಯುವ ಜನತೆಗಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿ ಈ ಸಮಾಜಕ್ಕೆ ಮನಕಲುಕುವ ಸಂದೇಶವೊಂದನ್ನು ರವಾನಿಸಿದ್ದಾರೆ.
ಬೆಲ್ಜಿಯಂನ ಸುಸೇನ್ ಹೈಲರ್ಟ್ಸ್ ಅವರು ಮಾರ್ಚ್ 20 ರಂದು ಉಸಿರಾಟದ ತೊಂದರೆಯಿಂದ ಅನಾರೋಗ್ಯಕ್ಕೊಳಗಾಗಿ ಆಸ್ಪತ್ರೆ ಸೇರಿದ್ದರು ನಂತರದ ದಿನಗಳಲ್ಲಿ ಕೋರನ ಸೋಂಕು ವೃದ್ಧೆಗೆ ತಗುಲಿರುವುದು ಖಚಿತವಾಗಿದ್ದು ಈ ಸಂದರ್ಭ ವೈದ್ಯರು ವೃದ್ಧೆಗೆ ಕೃತಕ ಉಸಿರಾಟವನ್ನು ಅಳವಡಿಸಲು ಹೋದಾಗ ನನಗೆ ಈ ಕೃತಕ ಉಸಿರಾಟದ ಅಗತ್ಯವಿಲ್ಲ ನಾನು ಜೀವನದಲ್ಲಿ ಬಹಳ ಸಾಧಿಸಿದ್ದೇನೆ ಮತ್ತು ಖುಷಿ ಪಟ್ಟಿದ್ದೇನೆ .ಈ ಕೃತಕ ಉಸಿರಾಟ ವ್ಯವಸ್ಥೆಯನ್ನು ಯುವಜನತೆಗೆ ಉಪಯೋಗಿಸಿ ಅವರ ಪ್ರಾಣವಾದರೂ ಉಳಿಯಲಿ ಎಂದಿದ್ದಾರೆ. ಅಜ್ಜಿಯ ಮಾತನ್ನು ಕೇಳಿದ ವೈದ್ಯರು ಕಣ್ಣಲ್ಲಿ ನೀರು ಬಂದಿದ್ದು ಈ ಕುರಿತಾಗಿ ವೈದ್ಯರು ಖಾಸಗಿ ವಾಹಿನಿಗೆ ಮಾಹಿತಿ ನೀಡಿದ್ದು ಅಜ್ಜಿಯ ಮನಕಲುಕುವ ಸುದ್ದಿ ಎಲ್ಲೆಡೆ ವೈರಲ್ ಆಗಿದೆ .

Comments
Post a Comment