ಮಹಿಳಾ ನರ್ಸ್‌ಗಳ ಅಸಭ್ಯವಾಗಿ ವರ್ತಿಸಿರುವ ಆರು ಜನ ಜಮಾತ್ ಕಾರ್ಯಕರ್ತರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯಿದೆ (ಎನ್‌ಎಸ್‌ಎ) ಅಡಿಯಲ್ಲಿಪ್ರಕರಣ ದಾಖಲಿಸಿಕೊಳ್ಳುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ದಾದಿಯರ ಜತೆ ಅಸಭ್ಯವಾಗಿ ವರ್ತಿಸಿದ ವಿಕೃತ ಮನಸ್ಥಿತಿಯ ಇಂತಹವರು ಮಾನವತೆಗೆ ದೊಡ್ಡ ಶತ್ರುಗಳು ಎಂದಿರುವ ಯೋಗಿ ಆದಿತ್ಯನಾಥ್, ಯಾರೇ ಆದರೂ ವ್ಯವಸ್ಥೆಯನ್ನು ಒಪ್ಪಿಕೊಂಡು ಆಸ್ಪತ್ರೆ ನಿಯಮಗಳನ್ನು ಪಾಲಿಸಬೇಕು. ಕೊರೊನಾ ಸೋಂಕಿನ ಬಿಕ್ಕಟ್ಟಿನ ಸನ್ನಿವೇಶದಲ್ಲಿ ಎಲ್ಲರೂ ಒಗಟ್ಟಾಗಿ ಹೋರಾಡಬೇಕು. ಇಂತಹ ಸಮಯದಲ್ಲಿ ದುರ್ವರ್ತನೆ ತೋರಿದರೆ ಸರಕಾರ ಅಂತಹವರ ವಿರುದ್ಧ ಸರಕಾರ ಮುಲಾಜಿದೆ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.ಇತ್ತ ಮಧ್ಯಪ್ರದೇಶದ ಇಂದೋರ್‌ನಲ್ಲಿ ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದವರ ಪೈಕಿ ನಾಲ್ವರ ವಿರುದ್ಧ ಎನ್‌ಎಸ್‌ಎ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ. ಆರೋಗ್ಯ ಇಲಾಖೆಯ ಐವರು ಸದಸ್ಯರನ್ನೊಳಗೊಂಡ ತಂಡ ಗುರುವಾರ ಕೋವಿಡ್ -19 ರೋಗಿಗಳು ಹಾಗೂ ಕ್ವಾರೆಂಟೈನ್ ನಲ್ಲಿರುವವರ ಸಂಬಂಧಿಕರ ಭೇಟಿಗಾಗಿ ಇಂದೋರ್‌ನ ತಾತ್ಪಟ್ಟಿ ಬಖಾಲ್ ಪ್ರದೇಶಕ್ಕೆ ತೆರಳಿದ್ದಾಗ ಗುಂಪೊಂದು ಕಲ್ಲುಗಳಿಂದ ದಾಳಿ ನಡೆಸಿದ್ದರು.

Comments
Post a Comment