ಕೊರೋನಾ ಎಫೆಕ್ಟ್ : ಸ್ಥಗಿತಗೊಂಡ ಟಿವಿ ಧಾರಾವಾಹಿಗಳು ಗೃಹಿಣಿಯರ ಹಿಡಿ ಶಾಪ

ಲಾಕ್ ಡೌನ್  ಸಮಯವನ್ನು ಟಿವಿ ಧಾರಾವಾಹಿ ನೋಡಿಕೊಂಡು ಕಳೆಯುತ್ತಿರುವವರಿಗೆ ಮತ್ತೊಂದು ಬ್ಯಾಡ್ ನ್ಯೂಸ್, ಕೆಲವು ಚಾನೆಲ್ ಗಳು ಕೆಲವು ದಿನಗಳ ಹಿಂದೆಯೇ ಧಾರಾವಾಹಿ ಶೂಟಿಂಗ್ ನಿಲ್ಲಿಸಿದ್ದಾರೆ.ಈ ಹಿನ್ನಲೆಯಲ್ಲಿ ಹೆಚ್ಚಿನ ಟಿವಿ ಧಾರಾವಾಹಿಗಳು  ಸ್ಥಗಿತ ಗೊಳ್ಳಲಿದ್ದು ಈ ಕುರಿತು ಮನೆಯಲ್ಲಿರುವ ಗೃಹಿಣಿಯರ ಹಿಡಿ ಶಾಪ ಹಾಕುತ್ತಿದ್ದು ,ಇಲ್ಲವಾದರೆ ದಿನವಿಡೀ ಧಾರಾವಾಹಿಗಳಿಂದ ಸದ್ದು ಮಾಡುತಿದ್ದ ಟಿವಿ ಸೈಲೆಂಟ್ ಮೋಡ್ ಗೆ ಹೋದದ್ದನ್ನು ಕಂಡು ಮನೆಯ ಗಂಡಸರು  ಮನದಲ್ಲೇ ನಗೆ ಬೀರುತ್ತಿದ್ದಾರೆ.

ಇನ್ನು ಕೆಲವು ಚಾನೆಲ್ ಗಳು ಹಳೆಯ ಸಂಚಿಕೆಗಳನ್ನು ಮರು ಪ್ರಸಾರ ಮಾಡುತ್ತಿವೆ ಆದರೆ ವೀಕ್ಷಕರು ಹೊಸ ಸಂಚಿಕೆಗಳನ್ನು ವೀಕ್ಷಿಸಲು ಬಹಳ ಕಾತರರಾಗಿದ್ದಾರೆ, ಆದರೆ ಹೊಸ ಸಂಚಿಕೆ ಪ್ರಸಾರ ಮಾಡಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ.ಕನ್ನಡದ ಉದಯ, ಕಲರ್ಸ್ ಕನ್ನಡ, ಜೀ ಕನ್ನಡ, ಸುವರ್ಣ ಚಾನೆಲ್ ಗಳ ಧಾರಾವಾಹಿ ಶೂಟಿಂಗ್ ಗಾಗಿ ನೂರಾರು ಮಂದಿ ತಂತ್ರಜ್ಞರು  ಹಾಗೂ ಕಲಾವಿದರು ಭಾಗವಹಿಸುತ್ತಿದ್ದರು.ಕಳ ಚಾನೆಲ್ ಗಳು ಹೆಚ್ಚುವರಿ ಎಪಿಸೋಡ್ ಶೂಟಿಂಗ್ ಮಾಡಿದ್ದು, ಅವೆಲ್ಲಾ ಮುಗಿಯುವ ಹಂತದಲ್ಲಿವೆ ಎಂದು ಕಲರ್ಸ್ ಕನ್ನಡ ಚಾನೆಲ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


Comments