ಚೀನಾದಿಂದ ಆರಂಭಗೊಂಡ ಕೊರೊನವೈರಸ್ ಇಟಲಿ ಸ್ಪೇನ್ ಮತ್ತು ಅಮೆರಿಕದಲ್ಲಿ ಭಾರಿ ಪ್ರಮಾಣದಲ್ಲಿ ಬಲಿ ಪಡೆದುಕೊಂಡಿದೆ .ಇಟಲಿಯಲ್ಲಿ ಹದಿನೈದು ಸಾವಿರಕ್ಕೂ ಹೆಚ್ಚು ಜನ ಮೃತಪಟ್ಟರೆ ಸ್ಪೇನ್ನಲ್ಲಿ ಹನ್ನೆರಡು ಸಾವಿರಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ .ವಿಶ್ವದ ದೊಡ್ಡಣ್ಣ ಎಂಬ ಖ್ಯಾತಿಯ ಅಮೆರಿಕದಲ್ಲಿ ಈವರೆಗೆ 337278 ಜನರಿಗೆ ಸೋಂಕು ದೃಢಪಟ್ಟಿದ್ದು ಈ ಪೈಕಿ 17,478ಮಂದಿ ಗುಣಮುಖ ಹೊಂದಿದ್ದಾರೆ.9637ಮಂದಿ ಮೃತಪಟ್ಟಿದ್ದು ಅಮೆರಿಕದಲ್ಲಿ ತಲುಪಿರುವ ಗಂಭೀರ ಪರಿಸ್ಥಿತಿಯನ್ನು ನಿಯಂತ್ರಿಸಲು ಟ್ರಂಪ್ ಸರಕಾರ ಶತಾಯ ಗತಾಯ ಪ್ರಯತ್ನ ಮಾಡುತ್ತಿದೆ .
ಇನ್ನು ಕೊರೊನ ಸೋಂಕಿತರ ಚಿಕಿತ್ಸೆಗೆ ಬಳಸಲು ಅವಕಾಶವಿರುವ ಮಲೇರಿಯಾ ನಿರೋಧಕ ಔಷಧ ಹೈಡ್ರಾಕ್ಸಿ ಕ್ಲೋರೋಕ್ವಿನ್ ಮೇಲೆ ಭಾರತ ಈಗಾಗಲೇ ರಫ್ತು ನಿರ್ಬಂಧ ಹೇರಿದೆ .ಈ ರಫ್ತು ನಿರ್ಬಂಧವನ್ನು ತೆಗೆದು ಹಾಕುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಶನಿವಾರ ದೂರವಾಣಿ ಕರೆ ಮಾಡಿ ಒತ್ತಾಯಿಸಿದ್ದಾರೆ ಎಂದು ವರದಿಯಾಗಿದೆ . ಹೈಡ್ರಾಕ್ಸಿ ಕ್ಲೋರೋಕ್ವಿನ್ ಮಾತ್ರೆಗಳು ಕೋರನ ಸೋಂಕಿತರಿಗೆ ಚಿಕಿತ್ಸೆ ನೀಡುವವರಿಗೆ ತೆಗೆದು ಕೊಂಡರೆ ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲದು ಮತ್ತು ಸೋಂಕು ತಗುಲುವ ಸಾಧ್ಯತೆ ಬಹಳ ಕಮ್ಮಿ ಇದೆ. ಈ ಮಾತ್ರೆಯನ್ನು ಭಾರತ ಮಾತ್ರ ಉತ್ಪಾದಿಸುತದೆ ಎಂಬುದು ಪ್ರಮುಖ ಅಂಶವಾಗಿದೆ .ಈ ಮಾತ್ರೆಗಳ ರಾಫ್ತಿಗೆ ಭಾರತೀಯ ಕಂಪನಿಗಳಿಗೆ ಅವಕಾಶ ಮಾಡಿಕೊಡಬೇಕೆಂದು ಡೊನಾಲ್ಡ್ ಟ್ರಂಪ್ ಆಗ್ರಹಿಸಿದ್ದು ಪ್ರಧಾನಿ ನರೇಂದ್ರ ಮೋದಿಯವರು ತೆಗೆದುಕೊಳ್ಳುವ ನಿರ್ಧಾರ ಯಾವ ರೀತಿ ಇದೆ ಎಂಬುದನ್ನು ಕಾದುನೋಡಬೇಕಿದೆ, ಇನ್ನು ಡೊನಾಲ್ಡ್ ಟ್ರಂಪ್ ಅವರಿಗೆ ಜನರ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಯೋಗಾಸನಕ್ಕೆ ಹೆಚ್ಚಿನ ಒತ್ತು ನೀಡುವಂತೆ ಸಲಹೆ ನೀಡಿದರು ಎಂದು ಮೂಲಗಳು ತಿಳಿಸಿವೆ.

Comments
Post a Comment