ಚೀನಾದಿಂದ ಆರಂಭಗೊಂಡ ಕೊರೊನ ವೈರಸ್ ಇದೀಗ ಭಾರತದಲ್ಲೂ ಸಾಂಕ್ರಾಮಿಕ ರೋಗದಂತೆ ಹರಡುತ್ತಿದೆ .ಭಾರತದಲ್ಲಿ ಪ್ರಮುಖವಾಗಿ ದೆಹಲಿಯ ನಿಜಾಮುದ್ದೀನ್ ಜಮಾತ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ವಾಪಸ್ ಆಗಮಿಸಿದ ಹೆಚ್ಚಿನವರಲ್ಲಿ ಕೊರೊನ ಸೋಂಕು ಕಾಣಿಸಿಕೊಂಡಿದೆ.ಈ ಪೈಕಿ ಹಲವರು ತಲೆಮರೆಸಿಕೊಂಡ ಹಿನ್ನೆಲೆ ಮತ್ತು ಆಸ್ಪತ್ರೆಯಲ್ಲಿ ದಾಖಲು ಗೊಂಡ ಜಮಾತ್ ಕಾರ್ಯಕರ್ತರ ವಿಕೃತ ಮನೋಭಾವನೆಗಳು ಜನರ ತಲೆಯನ್ನು ಕೆಡಿಸಿ ಬಿಟ್ಟಿದೆ .ಸಾಮಾಜಿಕ ಜಾಲತಾಣದಲ್ಲಿ ಕೆಲವರು ಎಂಜಲು ಹಚ್ಚುವ ವಿಡಿಯೊಗಳು ವೈರಲ್ ಕೂಡ ಆಗಿದೆ ಈ ನಡುವೆ ಮಂಗಳೂರಿನ ಕುಂಪಲ ಪ್ರದೇಶದ ಆಶ್ರಯ ಕಾಲೊನಿ ನಾಗರಿಕರು ತಮ್ಮ ಕಾಲೊನಿಗೆ ಮುಸ್ಲಿಂ ವ್ಯಾಪಾರಿ ಗಳಿಗೆ ಪ್ರವೇಶವಿಲ್ಲ ಎಂಬ ಫಲಕವನ್ನು ಅಂಟಿಸಿದ್ದಾರೆ .ಈ ಫಲಕದಲ್ಲಿ ಆಶ್ರಯ ಕಾಲೊನಿ ನಾಗರಿಕರ ಹಿತದೃಷ್ಟಿಯಿಂದ ಕೊರೊನ ವೈರಸ್ ಸಂಪೂರ್ಣವಾಗಿ ಹೋಗುವವರೆಗೆ ನಮ್ಮ ಊರಿಗೆ ಯಾವುದೇ ಮುಸಲ್ಮಾನ ವ್ಯಾಪಾರಿಗಳಿಗೆ ಪ್ರವೇಶವಿಲ್ಲ ಎಂದು ಉಲ್ಲೇಖಿಸಲಾಗಿದೆ .


Comments
Post a Comment