ಹರಿಯಾಣದ ಕರ್ನಲ್ ಎಂಬ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಕರೊನಾ ಸೋಂಕು ಪೀಡಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 55 ವರ್ಷದ ವ್ಯಕ್ತಿಯೊಬ್ಬ ಅಲ್ಲಿಂದ ಎಸ್ಕೇಪ್ ಆಗೋದಕ್ಕೆ ಪ್ರಯತ್ನಸಿದ್ದ. ಹೇಗೆ ಅಂತೀರಾ? ಆತ ಇದ್ದುದು 6ನೇ ಮಹಡಿಯಲ್ಲಿ. ಅಲ್ಲಿಂದ ಎಸ್ಕೇಪ್ ಆಗೋದಕ್ಕೆ ಅಲ್ಲಿದ್ದ ಬೆಡ್ಶೀಟ್ಗಳನ್ನು ಬಳಸಿದ್ದ. ಅವುಗಳನ್ನು ದಾರದಂತೆ ಬಳಸಿಕೊಂಡು ಕೆಳಕ್ಕಿಳಿದು ಓಡೋದಕ್ಕೆ ಪ್ರಯತ್ನಿಸಿದ್ದ.ಆದರೆ ಈ ಅಪಾಯಕಾರಿ ಸಾಹಸ ಕೈಗೂಡಲಿಲ್ಲ. ಮೇಲಿಂದ ನೆಲಕ್ಕೆ ಬಿದ್ದು ಗಂಭೀರ ಗಾಯಗೊಂಡ. ಅಷ್ಟೇ ಅಲ್ಲ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಡಿಸಿ ನಿಶಾಂತ್ ಕುಮಾರ್ ಯಾದವ್, ರೋಗಿಯ ಹೆಸರು ಶಿವಶರಣ್. ಆತ ಪಾಣಿಪತ್ನ ನಿವಾಸಿ. ಏಪ್ರಿಲ್ ಒಂದರಂದು ಆಸ್ಪತ್ರೆಯಿಂದ ಪರಾರಿಯಾಗಲು ಪ್ರಯತ್ನಿಸಿ ಬಿದ್ದು ಗಂಭೀರ ಗಾಯಗೊಂಡು ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದ. ಶಂಕಿತ ಸೋಂಕು ಪೀಡಿತನಾದ್ದರಿಂದ ಹೆಚ್ಚಿನ ನಿಗಾ ವಹಿಸಲಾಗಿತ್ತು. ಆದರೆ ಚಿಕಿತ್ಸೆ ಫಲನೀಡಲಿಲ್ಲ ಎಂದು ತಿಳಿಸಿದ್ದಾರೆ.

Comments
Post a Comment