ಕೊರೊನ ಹಾವಳಿ ಬೆನ್ನಲ್ಲೇ ಕೇರಳದ ವೈದ್ಯೆ ಶಿಫಾ ಮೊಹಮ್ಮದ್ ತನಗೆ ರೋಗಿಗಳು ಮೊದಲು ನಂತರ ಮದುವೆ ಎಂದು ನಿರ್ಧಾರ ಕೈಗೊಂಡು ತಮ್ಮ ಮದುವೆಯನ್ನು ಮುಂದೂಡಿದ್ದಾರೆ . 23 ವರ್ಷದ ಶಾಫಿಯಾ ಕಣ್ಣೂರಿನ ಪರಿಯಾರಂ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು ಕೊರೊನ ಪೀಡಿತರಿಗೆ ಚಿಕಿತ್ಸೆ ನೀಡುತ್ತಿದ್ದಾರೆ .ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು ಮದುವೆ ಮುಂದೂಡಬಹುದು ಆದರೆ ನನ್ನ ರೋಗಿಗಳನ್ನು ಅಲ್ಲ ಅವರು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ ಎಂದಿದ್ದಾರೆ. ಪ್ರತಿಯೊಬ್ಬ ಹೆಣ್ಣಿನ ಬದುಕಿನಲ್ಲಿ ಮದುವೆ ಬಹಳ ಮುಖ್ಯವಾದ ವಿಚಾರವಾಗಿದ್ದು ನನ್ನ ಮಗಳು ಸಾಮಾಜಿಕ ಕಳಕಳಿಯಿಂದ ಉತ್ತಮವಾದ ನಿರ್ಧಾರ ತೆಗೆದುಕೊಂಡಿದ್ದಾಳೆ ಎಂದು ಶಾಫಿಯಾ ತಂದೆ ಮಗಳನ್ನು ಬೆಂಬಲಿಸಿದ್ದಾರೆ .ಸದ್ಯ ಶಾಫಿಯಾ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
Comments
Post a Comment