ಭಾರತದ ಸಂಜೀವಿನಿ ಪಡೆದ ಇಸ್ರೇಲ್

ಭಾರತದಲ್ಲಿ ಉತ್ಪಾದನೆಯಾಗುತ್ತಿರುವ ಮಲೇರಿಯಾ ಔಷಧ ಹೈಡ್ರೋಕ್ಸಿ ಕ್ಲೋರೋಕ್ವಿನ್ ಔಷಧ ಜಗತ್ತಿನ ಹಲವು ದೇಶಗಳಿಗೆ ಸಂಜೀವಿನಿಯಾಗಿ ಪರಿಣಮಿಸಿದೆ . ಕೋರನ ವಿರುದ್ಧ ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲ ಈ ಔಷಧದ ರಫ್ತು ನಿಷೇಧವನ್ನು ಭಾರತ ತೆರವುಗೊಳಿಸಿದಕ್ಕೆ ವಿಶ್ವದ ನಾಯಕರು ಪ್ರಧಾನಿ ಮೋದಿಗೆ ಕೃತಜ್ಞತೆ ಸಲ್ಲಿಸಿದ್ದಾರೆ .ಅಮೆರಿಕ ಇಸ್ರೇಲ್ ಬ್ರೆಜಿಲ್ ಶ್ರೀಲಂಕಾ ಸೇರಿದಂತೆ ಹಲವು ರಾಷ್ಟ್ರಗಳಿಗೆ ಈ ಔಷಧ ಪೂರೈಕೆ ಪ್ರಾರಂಭವಾಗಿದೆ .ಇನ್ನು ಭಾರತದ ಸಂಜೀವಿನಿಯನ್ನು ಪಡೆದ ಇಸ್ರೇಲ್ ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ತಿಳಿಸಿದ್ದಾರೆ .ಈ ಕುರಿತು ಟ್ವೀಟ್ ಮಾಡಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಇಸ್ರೇಲ್ನ ಇಡೀ ನಾಗರಿಕರು ಭಾರತಕ್ಕೆ ಧನ್ಯವಾದ ತಿಳಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

Comments