ಬಿಎಸ್ವೈ ಅವರೇ ಯೋಗಿ ಆದಿತ್ಯನಾಥ್ ಮಾದರಿ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದ ಬಸವನಗೌಡ ಪಾಟೀಲ್ ಯತ್ನಾಳ್

ಕರ್ನಾಟಕದಲ್ಲಿ  ಕೊರೊನ ವೈರಸ್ ತಡೆಗಟ್ಟಲು ರಾಜ್ಯ ಸರ್ಕಾರ ಶತಾಯಗತಾಯ ಪ್ರಯತ್ನ ಮಾಡುತ್ತಿದೆ .ಈ ಸಂದರ್ಭ ದಿಲ್ಲಿಯ ನಿಜಾಮುದ್ದಿನ್ ಜಮಾತ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬಂದವರ ಹಲವರ ಪೈಕಿ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇವರನ್ನು ಪತ್ತೆ ಮಾಡಲು ಸರ್ಕಾರ ಕ್ರಮ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಕೆಲಸಕ್ಕೆ ನಿರತವಾದ ಆಶಾ ಕಾರ್ಯಕರ್ತರ ಮೇಲೆ ಮುಸ್ಲಿಂ ಯುವಕರ ಗುಂಪು ಹಲ್ಲೆ ನಡೆಸಿದ್ದು ಮತ್ತು ಲಾಕ್  ಡೌನ್ ನಡುವೆ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿಯಾಗಿ ಪೊಲೀಸರ ಮೇಲೆ ಹುಬ್ಬಳ್ಳಿಯಲ್ಲಿ ಮುಸ್ಲಿಂ ಯುವಕರು ಕಲ್ಲು ತೂರಾಟ ನಡೆಸಿದ್ದರು . ಈ ಬೆಳವಣಿಗೆ ಕುರಿತು  ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಅಲ್ಪಸಂಖ್ಯಾತ ಸಮುದಾಯದ ನಾಯಕರ ಜೊತೆ ಚರ್ಚೆ ಮಾಡಿ ಅಲ್ಪಸಂಖ್ಯಾತ ನಾಯಕರಿಗೆ ತಿಳಿಹೇಳುವ ಕೆಲಸವನ್ನು ಮಾಡಿದ್ದಾರೆ .

ಇನ್ನು ಈ ಕುರಿತು ಕಿಡಿಕಾರಿದ ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಇದು ಅತೀಯಾಯಿತು ಕೈ ಮುಗಿದು ಕೇಳುವ ಸಮಯವಲ್ಲ ಸಂವಿಧಾನ ಮತ್ತು ಕಾನೂನು ಪ್ರಕಾರ ಕೈಗೊಳ್ಳಿ. ಉ ಪ್ರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್  ಮಾದರಿ ಅನುಸರಿಸಿ ಮಾನವೀಯತೆ ಇಲ್ಲದ ಅಯ್ಯೋಗರ ಜೊತೆ ಸಭೆ ಚರ್ಚೆ ಅವಶ್ಯಕತೆ ಇಲ್ಲ. N I A ಪ್ರಕಾರ ಪ್ರಕರಣ ದಾಖಲಿಸಿಅತ್ಯಂತ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Comments