ಕೋರನ ವೈರಸ್ : ರಾಮಾಯಣವನ್ನು ಉಲ್ಲೇಖಿಸಿ ನಮಗೂ ಔಷಧಿ ನೀಡಿ ಎಂದ ಬ್ರೆಜಿಲ್ ಅಧ್ಯಕ್ಷ

ನವದೆಹಲಿ : ಕೊರೊನ  ವೈರಸ್  ವಿರುದ್ಧ ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲ ಔಷಧಿಯ ರಫ್ತಿಗೆ ಭಾರತ ಸರ್ಕಾರ ನಿಷೇಧ ಹೇರಿದ ಬೆನ್ನಲ್ಲೇ ಜಗತ್ತಿನ ಹಲವು ದೇಶಗಳು ಈ ನಿಷೇಧವನ್ನು ವಾಪಸ್ ಪಡೆಯುವಂತೆ ಪ್ರಧಾನಿ ನರೇಂದ್ರ ಮೋದಿಯವರ ಜೊತೆ ಮನವಿ ಮಾಡುತ್ತಿದೆ.ಈ ಬೆನ್ನಲ್ಲೇ ಬ್ರೆಜಿಲ್ ಅಧ್ಯಕ್ಷ  ಜೈರ್ ಬೋಲ್ಸನಾರೊ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಬರೆದ ಪತ್ರದಲ್ಲಿ ರಾಮಾಯಣವನ್ನು ಉಲ್ಲೇಖಿಸಿ ನಮಗೂ ಕೊರೊನ ವೈರಸ್ ಮೇಲೆ ಪರಿಣಾಮಕಾರಿಯಾಗಿ ಕೆಲಸ ಮಾಡುವ ಔಷಧಿಗಳ  ರಫ್ತಿನ ನಿಷೇಧವನ್ನು ತೆಗೆಯಿರಿ ಎಂದು ಒತ್ತಾಯಿಸಿದ್ದಾರೆ .ಪ್ರಮುಖವಾಗಿ ಭಾರತ ಮಲೇರಿಯಾಕ್ಕೆ ನೀಡುವ ಔಷಧ ಹೈಡ್ರಾ ಕ್ಲೋರೋಕ್ವಿನ್  ರಫ್ತಿನ ಮೇಲೆ ನಿಷೇಧ ಹೇರಿತ್ತು .

ಬ್ರೆಜಿಲ್  ಅಧ್ಯಕ್ಷ   ಜೈರ್ ಬೋಲ್ಸನಾರೊ ಬರೆದ ಪತ್ರದಲ್ಲಿ ಭಗವಾನ್ ಹನುಮಾನ್ ಶ್ರೀರಾಮನ ಸಹೋದರ ಲಕ್ಷ್ಮಣನ ಪ್ರಾಣ ಉಳಿಸಲು ಹಿಮಾಲಯದಿಂದ ಸಂಜೀವಿನಿ ತಂದಂತೆ  ಮತ್ತು ಯೇಸು ಅನಾರೋಗ್ಯದಿಂದ ಬಳಲುತ್ತಿದ್ದ ನಿರ್ಗತಿಕರನ್ನು ಗುಣಪಡಿಸಿದರು .ಎಂಬ ಉದಾಹರಣೆಯನ್ನು ನೀಡಿದ್ದಾರೆ ಭಾರತ ಬ್ರೆಜಿಲ್ ಜೊತೆಗೂಡಿ ಕೆಲಸ ಮಾಡಿ ಕೊರೊನ ವೈರಸ್ಸನ್ನು ಹಿಮ್ಮೆಟ್ಟಿಸಬೇಕಿದೆ ಎಂಬ ಮನವಿಯನ್ನು ಪ್ರಧಾನಿ ಮೋದಿಯವರಿಗೆ  ಜೈರ್ ಬೋಲ್ಸನಾರೊ ಮಾಡಿದ್ದಾರೆ . ಸದ್ಯ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮನವಿ ಮೇರೆಗೆ ಅಮೆರಿಕಕ್ಕೆ ಹೈಡ್ರೋ ಕ್ಲೋರೋಕ್ವಿನ್ ಔಷಧವನ್ನು ರಫ್ತು ಮಾಡಲು ಭಾರತ ಒಪ್ಪಿಕೊಂಡಿದೆ.



Comments