ಪಶ್ಚಿಮ ಬಂಗಾಳದಲ್ಲಿ ವಿಪರೀತ ಲಾಕ್‌ಡೌನ್‌ ಉಲ್ಲಂಘನೆ :ಮಮತಾ ಬ್ಯಾನರ್ಜಿ ಅವರೇ ಉತ್ತರಿಸಿ ಎಂದ ಕೇಂದ್ರ

ಕೊರೊನಾ ಹರಡುವಿಕೆ ನಿಯಂತ್ರಣಕ್ಕಾಗಿ ದೇಶಾದ್ಯಂತ ಜಾರಿಯಲ್ಲಿರುವ ಲಾಕ್‌ಡೌನ್‌ ಸರಿಯಾಗಿ ಪಾಲಿಸದೆ , ಅದನ್ನು ಉಲ್ಲಂಘಿಸುವ ಜನರಿಗೂ ಮನವರಿಕೆ ಮಾಡಿಕೊಡದೆ ನಿರ್ಲಕ್ಷ್ಯ ಧೋರಣೆ ಪ್ರದರ್ಶಿಸಿರುವ ಪಶ್ಚಿಮ ಬಂಗಾಳ ಸರಕಾರಕ್ಕೆ ಗೃಹ ಸಚಿವಾಲಯ ಸ್ಪಷ್ಟನೆ ಕೇಳಿ ಪತ್ರ ಬರೆದಿದೆ.ನಾರ್ಕೆಲ್‌ ದಂಗಾ, ರಾಜಾಬಜಾರ್‌, ತೊಪ್ಸಿಯಾ, ಮೆಟಿಯಾಬ್ರುಜ್‌ ಪ್ರದೇಶಗಳಲ್ಲಿ ಭಾರಿ ಪ್ರಮಾಣದಲ್ಲಿ ಲಾಕ್‌ಡೌನ್‌ ಉಲ್ಲಂಘನೆ ಪ್ರಕರಣಗಳು ಬೆಳಕಿಗೆ ಬಂದಿದೆ. ಅಲ್ಲದೆ ಸಾಮಾಜಿಕ ಅಂತರವನ್ನು ಕೂಡ ಜನರು ಕಡೆಗಣಿಸಿದ್ದಾರೆ. ಇದಕ್ಕೆ ರಾಜ್ಯ ಸರಕಾರದ ಮನವರಿಕೆ ಯತ್ನದ ವಿಫಲತೆಯೇ ಕಾರಣ ಎಂದು ಪತ್ರದಲ್ಲಿ ಗೃಹ ಸಚಿವಾಲಯ ಖಾರವಾಗಿ ಆರೋಪಿಸಿದೆ.


Comments