ಚಿಕ್ಕಬಳ್ಳಾಪುರದಲ್ಲಿ ಅಕ್ರಮವಾಗಿ ಗೋಮಾಂಸ ಸಾಗಿಸುವ ವಾಹನದಲ್ಲಿ ಸಿಕ್ಕಿಬಿದ್ದ ಇಲ್ಲಿನ ಭಗತ್‌ಸಿಂಗ್ ನಗರ ನಿವಾಸಿ, 18 ವರ್ಷದ ಯುವಕನಿಗೆ ಶನಿವಾರ ಸೋಂಕು ದೃಢಪಟ್ಟಿದ್ದು, ಗೌರಿಬಿದನೂರು ತಾಲೂಕಿನ ಚಂದನದೂರು ಬಳಿ ಈತನನ್ನು ಹಿಡಿದ ಪೊಲೀಸರು ಸೇರಿ 22 ಮಂದಿ ಕ್ವಾರಂಟೈನ್ ಶಿಕ್ಷೆ ಅನುಭವಿಸುವಂತಾಗಿದೆ.
ಈತ ಕಳೆದ ಮಾರ್ಚ್ 20ರಂದು ಆಂಧ್ರದ ಹಿಂದೂಪುರದಲ್ಲಿನ ತನ್ನ ಮಾವನ ಮನೆಗೆ ಹೋಗಿದ್ದು, ಅದರ ಮಾರನೇ ದಿನವೇ ಲಾಕ್‌ಡೌನ್ ಘೋಷಣೆಯಾದ ಹಿನ್ನೆಲೆಯಲ್ಲಿ ಅಲ್ಲಿಯೇ ಉಳಿದುಕೊಂಡಿದ್ದ. ಏ. 23ರಂದು ಹಿಂದೂಪುರದಿಂದ ಗೋ ಮಾಂಸ ಸಾಗಿಸುತ್ತಿದ್ದ ವಾಹನ ಹತ್ತಿ ಗೌರಿಬಿದನೂರು ತಾಲೂಕು ಚಂದನದೂರು ಮಾರ್ಗವಾಗಿ ತೆರಳುತ್ತಿದ್ದಾಗ ಅನುಮಾನಗೊಂಡ ಗ್ರಾಮಸ್ಥರು ವಾಹನ ತಡೆದು ಪರಿಶೀಲನೆ ನಡೆಸಿದ್ದು, ತರಕಾರಿ ಪೆಟ್ಟಿಗೆಗಳಿದ್ದ ಬೊಲೆರೋ ವಾಹನದಲ್ಲಿ ದನದ ಮಾಂಸ ಪತ್ತೆಯಾಗಿದೆ. ತರಕಾರಿ ಮಾರುವ ನೆಪದಲ್ಲಿ ದನದ ಮಾಂಸ ಸಾಗಾಣೆ ಮಾಡುತ್ತಿರುವುದನ್ನು ಕಂಡ ಗ್ರಾಮಸ್ಥರು ಅಲ್ಲಿಯೇ ಮೂವರನ್ನು ಥಳಿಸಿ ಪೊಲೀಸರು ಮತ್ತು ಪಿಡಿಒಗೆ ವಿಷಯ ಮುಟ್ಟಿಸಿದ್ದಾರೆ.
ವಿಚಾರಣೆ ನಡೆಸಿದ ಪೊಲೀಸರಿಗೂ ಕ್ವಾರಂಟೈನ್
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪಿಎಸ್‌ಐ ಹಾಗೂ ಸಿಬ್ಬಂದಿ ಠಾಣೆಗೆ ಕರೆತಂದು ವಿಚಾರಣೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ವೇಳೆ ಹಿಂದೂಪುರದಿಂದ ಬಂದಿರುವುದು ಖಚಿತವಾಗುತ್ತಿದ್ದಂತೆ ಅವರನ್ನು ಆರೊಗ್ಯ ಅಧಿಕಾರಿಗಳು ತಪಾಸಣೆಗೆ ಒಳಪಡಿಸಿ ಆಸ್ಪತ್ರೆ ಕ್ವಾರಂಟೈನ್ ಮಾಡಿದ್ದಾರೆ. ಜತೆಗೆ ಮೂವರ ರಕ್ತದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಿದ್ದು, ಒಬ್ಬರಲ್ಲಿ ಶನಿವಾರ ಪಾಸಿಟಿವ್ ಬಂದಿದೆ. ಕೂಡಲೇ ಆತನನ್ನು ಚಿಕ್ಕಬಳ್ಳಾಫುರ ಕೋವಿಡ್ ಆಸ್ಪತ್ರೆಗೆ ರವಾನಿಸಲಾಗಿದೆ.
ಸದ್ಯ ಈ ಕೊರೊನಾ ಸೋಂಕಿತನನ್ನು ತಡೆದ ಚಂದನೂರು ಗ್ರಾಮದ ಪಿಡಿಒ, ಇತರ 10 ಮಂದಿ ಗ್ರಾಮಸ್ಥರು ಹಾಗೂ ವಿಚಾರಣೆಗೊಳಪಡಿಸಿದ ಗ್ರಾಮಾಂತರ ಠಾಣೆ ಪಿಎಸ್‌ಐ ಸಹಿತ 11 ಮಂದಿ ಸಿಬ್ಬಂದಿ ಸೇರಿ ಒಟ್ಟು 22 ಮಂದಿಯನ್ನು ಪ್ರಸ್ತುತ ಕ್ವಾರಂಟೈನ್ ಮಾಡಲಾಗಿದೆ. ಸೋಂಕಿತ ಭೇಟಿ ನೀಡಿದ ಠಾಣೆಯನ್ನು ಸ್ವಚ್ಛಗೊಳಿಸಿದ್ದು, ವಿಷಯ ತಿಳಿದು ಎಸ್ಪಿ ಮಿಥುನ್‌ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
via :vijayakaranataka

Comments
Post a Comment