ತಡರಾತ್ರಿ ಅರ್ನಬ್ ಗೋಸ್ವಾಮಿ ಮೇಲಿನ ಹಲ್ಲೆಯನ್ನು ಸಂಭ್ರಮಿಸಿದ ಕಾಂಗ್ರೆಸ್ !

ರಾಷ್ಟ್ರೀಯ ವಾಹಿನಿ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಅವರು ತಮ್ಮ ಕೆಲಸ ಮುಗಿಸಿಕೊಂಡು ಸ್ಟುಡಿಯೋದಿಂದ ಮನೆಯ ಕಡೆ ಕಾರಿನಲ್ಲಿ ಹೊರಟಿದ್ದ ಸಂದರ್ಭ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸಿದ್ದ ಕುರಿತು ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ .ಇನ್ನು ತಡ ರಾತ್ರಿ ಈ ಹಲ್ಲೆಯನ್ನು ಸಮರ್ಥಿಸಿ ಕಾಂಗ್ರೆಸ್ ನಾಯಕಿ ಅಲ್ಕಾ ಲಂಬಾ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸಂಭ್ರಮಿಸಿದ್ದಾರೆ .ಯೂತ್ ಕಾಂಗ್ರೆಸ್ ಗೆ ಜಯವಾಗಲಿ ಎನ್ನುವ ಟ್ವೀಟ್ ಅನ್ನು ಮಾಡಿ ಸಂಭ್ರಮಿಸಿದ್ದಾರೆ.ಈ ಕುರಿತು ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಹರಿಹಾಯುತ್ತಿದ್ದಾರೆ .ಇನ್ನು ಪ್ರಕರಣಕ್ಕೆ ಸಂಬಂಧಿಸಿ ಮಾತನಾಡಿರುವ ಅರ್ನಾಬ್ ಗೋಸ್ವಾಮಿಯವರು ಈ ದಾಳಿಗೆ ಸೋನಿಯಾ ಗಾಂಧಿ ಅವರೇ ನೇರ ಹೊಣೆ, ಈ ದೇಶದ ಅತಿ ದೊಡ್ಡ ಹೇಡಿ ಎಂದರೆ ಅದು ನೀವು, ನಿಮಗೆ ನನ್ನನ್ನು ಎದುರಿಸುವ ಧೈರ್ಯವಿಲ್ಲ ನನಗೇನಾದರೂ ಆದರೆ ಅದಕ್ಕೆ ಸೋನಿಯಾ ಗಾಂಧಿ ನೇರ ಹೊಣೆ ಎಂದಿದ್ದಾರೆ .

Comments