ಪೊಲೀಸರ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿ ಡಿಜಿಪಿಗೆ ಪತ್ರ ಬರೆದ ಕೊಬ್ರಾ ಬಟಾಲಿಯನ್ ಅಸಿಸ್ಟೆಂಟ್ ಕಮಾಂಡಂಟ್ ಶ್ಯಾಮ್ ಸುಂದರ

ಕರ್ತವ್ಯ ನಿರತ ಪೊಲೀಸರ ಮೇಲೆ ಸಿಆರ್‌ಪಿಎಫ್ ಯೋಧನಿಂದ ಹಲ್ಲೆ ಪ್ರಕರಣ ಸಂಬಂಧ ಈಗ ಯೋಧ ಸಚಿನ ಸಾವಂತನನ್ನ ಪೊಲೀಸ ಠಾಣೆಯಲ್ಲಿ ಕೈಗೆ ಬೇಡಿ ಹಾಕಿ ಕೂರಿಸಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.ಸದಲಾಗ ಪೊಲೀಸ ಠಾಣೆಯಲ್ಲಿ ಸಿ ಆರ್ ಪಿ ಎಫ್ ಕೊಬ್ರಾ ಕಮಾಂಡೋ  ಯೋಧನಿಗೆ ಚೈನ್ ಹಾಕಿ ಕೂರಿಸಿದ್ದ ಪೊಲೀಸರ ವಿರುದ್ಧ ಸಾಮಾಜಿಕ ಜಾಲ ತಾಣದಲ್ಲಿ ಪೊಲೀಸರ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದೆ‌.

ಸಿಆರ್‌ಪಿಎಫ್ ಕೊಬ್ರಾ ಬಟಾಲಿಯನ್ ಕಾನ್ಸ್‌ಟೇಬಲ್ ಆಗಿರುವ ಯೋಧ ಸಚಿನ ಸಾವಂತ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು ಯೋಧನಿಗೆ ಇನ್ನೂ ಜಾಮೀನು ಸಿಕ್ಕಿಲ್ಲ. ಪೊಲೀಸರ ಕ್ರಮಕ್ಕೆ ಸಿಆರ್‌ಪಿಎಫ್ ಕೊಬ್ರಾ ಬಟಾಲಿಯನ್ ಅಸಿಸ್ಟೆಂಟ್ ಕಮಾಂಡಂಟ್ ಶ್ಯಾಮ್ ಸುಂದರ ಅವರು ಕರ್ನಾಟಕ ಡಿಜಿಪಿಗೆ ಟ್ವೀಟ್ ಹಾಗೂ ಪತ್ರದ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಘಟನೆ ನಂತರ ಎಫ್ಐಆರ್ ದಾಖಲಿಸುವ ಮುನ್ನ ನಮ್ಮ ಗಮನಕ್ಕೂ ತರಬೇಕಿತ್ತು. ಪೊಲೀಸರು ಲಾಟಿಯಿಂದ ಹೊಡೆಯುವಾಗ ಆತ್ಮರಕ್ಷಣೆಗೆ ಪ್ರತಿ ದಾಳಿ ಮಾಡಿದ್ದಾನೆ, ಆದರೆ ಪೊಲೀಸರು ಯೋಧ ಅಂತ ತಿಳಿದ ಮೇಲೂ ಠಾಣೆಯಲ್ಲಿ ಕೈಗೆ ಚೈನ್ ಕೂರಿಸಿದ್ದು ಸರಿಯಲ್ಲ ಎಂದುಅಸಿಸ್ಟೆಂಟ್ ಕಾಮಾಂಡಂಟ್ ಶ್ಯಾಮ್ ಸುಂದರರಿಂದ ಕರ್ನಾಟಕ ಡಿಜಿಪಿ‌ಗೆ ಪತ್ರ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ ‌.

Comments