ಸಿಆರ್​ಪಿಎಫ್ ಕೋಬ್ರಾ ಕಮಾಂಡೋ ಗೆ ಜಾಮೀನು

ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರ ಮೀಸಲು ಪೊಲೀಸ್ ಪಡೆಯ ಕಮಾಂಡೋ ಸಚಿನ್ ಸಾವಂತ್ ಅವರಿಗೆ ಬೆಳಗಾವಿಯ  ಚಿಕೋಡಿಯ 1 ನೇ ಜೆಎಂಎಫ್‌ಸಿ ನ್ಯಾಯಾಲಯ  ಜಾಮೀನು ನೀಡಿದೆ.. ಏಪ್ರಿಲ್ 23 ರಂದು ಕರ್ತವ್ಯ ನಿರ್ವಹಿಸುವಾಗ ಪೊಲೀಸ್ ಕಾನ್‌ಸ್ಟೆಬಲ್ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಕಮಾಂಡೋ ಸಚಿನ್ ಸವಾಂತ್ ಅವರನ್ನು  ಬಂಧಿಸಲಾಗಿತ್ತು.ಇನ್ನು ಸಚಿನ್ ಸಾವಂತ್ ಅವರ ವಿರುದ್ಧ ಪೊಲೀಸರು ನಡೆಸಿಕೊಂಡ ರೀತಿ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

ಈ ಸಂಬಂಧ ಸಿಆರ್​ಪಿಎಫ್ ಅಧಿಕಾರಿಗಳು ಕೂಡ ಪೋಲೀಸರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಇನ್ನು ಪ್ರಕರಣಕ್ಕೆ ಸಂಬಂಧಿಸಿ  ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ತನಿಖೆಗೆ  ಆದೇಶ ಹೊರಡಿಸಿದ್ದಾರೆ. ಅದರಂತೆ ಬೆಳಗಾವಿ ವಲಯ ಐಜಿಪಿ ರಾಘವೇಂದ್ರ ಸುಹಾಸ್ ನೇತೃತ್ವದಲ್ಲಿ ತನಿಖೆ ನಡೆಯಲಿದೆ ಎಂದು ವರದಿ ಆಗಿದೆ.

Comments