ಮುಸ್ಲಿಂ ಡೆಲಿವರಿ ಹುಡುಗನಿಂದ ದಿನಸಿ ತೆಗೆದುಕೊಳ್ಳಲು ನಿರಾಕರಿಸಿದ ವ್ಯಕ್ತಿಯ ಬಂಧನ

 ಮುಸ್ಲಿಂ ಡೆಲಿವರಿ ಯುವಕನಿಂದ ಡೆಲಿವರಿ ಸ್ವೀಕರಿಸಲು ನಿರಾಕರಿಸಿದ ವ್ಯಕ್ತಿಯೊಬ್ಬರನ್ನು ಮಹಾರಾಷ್ಟ್ರ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ ಎಂದು ವರದಿಯಾಗಿದೆ .ಬಂಧಿತರನ್ನು ಮೀರಾ ರೋಡ್ ನಿವಾಸಿ ಗಜಾನನ ಚತುರ್ವೇದಿ ಎಂದು ಹೇಳಲಾಗಿದ್ದು ,ಮಂಗಳವಾರ ಇವರು ಆನ್ ಲೈನ್ ಗ್ರಾಫರ್ ಮುಖಾಂತರ ದಿನಸಿ ಸಾಮಗ್ರಿಗಳನ್ನು ಆರ್ಡರ್ ಮಾಡಿರುತ್ತಾರೆ .

ಈ ದಿನಸಿ ಸಾಮಗ್ರಿಗಳ ವಿತರಣೆ ಮಾಡಲು  ಆಗಮಿಸಿದ ಡೆಲಿವರಿ ಬಾಯ್ ಉಸ್ಮಾನ್ ಪಟೇಲ್ ಬಳಿ ಸುಪ್ರಿಯಾ ಚತುರ್ವೇದಿ ಅವರು ಡೆಲಿವರಿ ಸ್ವೀಕರಿಸುವಾಗ ಆಗಮಿಸಿದ  ತಂದೆ ಗಜಾನನ್ ಚತುರ್ವೇದಿ ಅವರು ಡೆಲಿವರಿ ಯುವಕನ  ಹೆಸರನ್ನು ಕೇಳಿ ಮುಸ್ಲಿಂ ಎಂದು ತಿಳಿದಾಕ್ಷಣ ಪಾರ್ಸೆಲನ್ನು ತೆಗೆದುಕೊಳ್ಳಲು ನಿರಾಕರಿಸಿದ್ದಾರೆ.ಈ ವೇಳೆ ಡೆಲಿವರಿ ಬಾಯ್ ಉಸ್ಮಾನ್ ಪಟೇಲ್ ವಿಡಿಯೋವನ್ನು ಮಾಡಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಗೊಂಡಿದೆ .ಈ ಸಂಬಂಧ ದೂರು ದಾಖಲಿಸಿದ ಉಸ್ಮಾನ್ , ದೂರನ್ನು ಆಧರಿಸಿ ಪೊಲೀಸರು ಗಜಾನಂದ ಚತುರ್ವೇದಿ ಅವರನ್ನು ಬಂಧಿಸಿದ್ದಾರೆ ಎಂದು ವರದಿಗಳು ತಿಳಿಸಿವೆ . ಘಟನೆ ಸಂಬಂಧಿಸಿ ವಿಡಿಯೋ ನೋಡಿ,

Comments