ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಭರ್ಜರಿ ದಾಳಿ ಉಗ್ರರು ಉಡೀಸ್!

ಕೊರೊನಾ ಪಾಕಿಸ್ಥಾನದಲ್ಲಿ ಅಟ್ಟಹಾಸ ಮೆರೆಯುತ್ತಿದ್ದರೂ ಅಲ್ಲಿನ ಉಗ್ರರು ಪಾಠ ಕಲಿದಂತಿಲ್ಲ! ಈ ಉಗ್ರರು ಅಪ್ರಚೋದಿತವಾಗಿ ಗಡಿ ಪ್ರದೇಶದಲ್ಲಿ ಭಾರತೀಯ ಯೋಧರ ಮೇಲೆ ಗುಂಡಿನ ದಾಳಿ ನಡೆಸುತ್ತಿದ್ದು, ಈ ಸಮಯದಲ್ಲಿ ಭಾರತೀಯ ಸೇನೆ ನಡೆಸಿದ ಪ್ರತಿದಾಳಿಯಲ್ಲಿ ಕಳೆದ ಹಲವು ದಿನಗಳಿಂದ ಸಾಲು ಸಾಲು ಉಗ್ರರ ಹೆಣಗಳು ಬೀಳುತ್ತಿದೆ.

ನೆನ್ನೆ ರಾತ್ರಿ ಗಡಿ ನುಸುಳಲು ಯತ್ನಿಸುತ್ತಿದ್ದ ನಾಲ್ಕು ಉಗ್ರರನ್ನು ಸಂಹಾರ ಮಾಡಿದ್ದ ಭಾರತೀಯ ಸೇನೆಯ ವೀರ ಯೋಧರು ಇಂದು ಮುಂಜಾನೆ ಮತ್ತೆ ಮೂವರು ಉಗ್ರರನ್ನು ಎನ್ಕೌಂಟರ್ ಮಾಡಿದೆ.ಭಾನುವಾರ ರಾತ್ರಿಯಷ್ಟೇ ನಾಲ್ಕು ಉಗ್ರರನ್ನು ಎನ್‌ಕೌಂಟರ್‌ ಮಾಡಿದ್ದ ಭದ್ರತಾ ಪಡೆಗಳು, ಸೋಮವಾರ ಬೆಳಗ್ಗೆ ಮತ್ತೆ ಮೂವರು ಉಗ್ರರನ್ನು ಹೊಡೆದುರುಳಿಸಿವೆ. ಈ ಮೂಲಕ ಗಡಿಯಲ್ಲಿ ಉಗ್ರರ ಉಪಟಳವನ್ನು ಸಮರ್ಥವಾಗಿ ಭದ್ರತಾ ಪಡೆಗಳು ಎದುರಿಸುತ್ತಿವೆ.

ದಕ್ಷಿಣ ಕಾಶ್ಮೀರದ ಕುಲ್ಗಾಂ ಜಿಲ್ಲೆಯ ಕ್ವಾಜಿಗಂಡ್‌ನ ಲೋವರ್‌ ಮುಂಡಾ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಮೂವರು ಉಗ್ರರು ಎನ್‌ಕೌಂಟರ್‌ ಆಗಿದ್ದಾರೆ. ಇದುವರೆಗೂ ಮೃತ ಉಗ್ರರನ್ನು ಗುರುತಿಸಲು ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಭಾನುವಾರ ಸಂಜೆಯಿಂದ ಉಗ್ರರಿಗಾಗಿ ಸರ್ಚ್‌ ಮತ್ತು ಕಾರ್ಡಾನ್‌ ಕಾರ್ಯಾಚರಣೆ ನಡೆಯುತ್ತಿದೆ. ಭಾರತೀಯ ಸೇನೆ, ಸಿಆರ್‌ಪಿಎಫ್‌ ಹಾಗೂ ಪೊಲೀಸರಿಂದ ಉಗ್ರರ ವಿರುದ್ಧ ಜಂಟಿ ಕಾರ್ಯಾಚರಣೆ ನಡೆಯುತ್ತಿದೆ. ಖಚಿತ ಮಾಹಿತಿಯೊಂದಿಗೆ ಉಗ್ರರು ಇರುವ ಸ್ಥಳ ಖಚಿತಪಡಿಸಿಕೊಂಡು, ಅಲ್ಲಿಗೆ ತೆರಳಿದ ಭದ್ರತಾ ಪಡೆಗಳ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ.

Comments