ತಾನು ಬಡವನಾಗಿದ್ದರೂ ಪರವಾಗಿಲ್ಲ ಇವರ ಹೃದಯ ವೈಶಾಲ್ಯತೆ ನೋಡಿದರೆ ನೀವು ಮೆಚ್ಚುಗೆ ವ್ಯಕ್ತಪಡಿಸುತ್ತೀರಾ !

ಸಾಂಕ್ರಾಮಿಕ ರೋಗ ಕೊರೊನ ವೈರಸ್ ದೇಶದೆಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಲಾಕ್  ಡೌನ್ ಘೋಷಣೆ ಮಾಡಲಾಗಿದೆ .ಈ ಸೋಂಕನ್ನು ತಡೆಯಲು ವೈದ್ಯಕೀಯ ಸಿಬ್ಬಂದಿ ಸೇರಿ ಪೊಲೀಸರು ಹಗಲು ರಾತ್ರಿ ಶ್ರಮ ಪಡುತ್ತಿದ್ದಾರೆ.ಈ ವೇಳೆ ವೈದ್ಯಕೀಯ ಸಿಬ್ಬಂದಿ ಸೇರಿ ಕರ್ತವ್ಯ ನಿರತವಾದ ಪೊಲೀಸರು ಅತಿ ಹೆಚ್ಚಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.

ಪ್ರಮುಖವಾಗಿ ಪೊಲೀಸರು ರಸ್ತೆಯಲ್ಲಿ ಕಾರ್ಯನಿರ್ವಹಿಸುವ ವೇಳೆ ಉರಿ ಬಿಸಿಲನ್ನು ಎದುರಿಸುವ ಜೊತೆ ತಮಗೆ ಬೇಕಾದ ಆಹಾರದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ .ಹಲವು ಕಡೆ ಪೊಲೀಸರಿಗೆ ಸ್ಥಳೀಯ ಸಂಘ ಸಂಸ್ಥೆಗಳ ನೆರವನ್ನು ನೀಡುತ್ತಿವೆ. ಇನ್ನು ಕೇರಳದಲ್ಲಿ ತಾನು ಬಡವನಾಗಿದ್ದರೂ ಹೃದಯ ವೈಶಾಲ್ಯತೆಯನ್ನು ಮೆರೆದ ವ್ಯಕ್ತಿಯೊಬ್ಬರು ತಾನು ದುಡಿದು ಇಟ್ಟ ಹಣದಿಂದ ಉರಿ ಬಿಸಿಲಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸರಿಗೆ ಬಾಳೆಹಣ್ಣು ,ಇತರ ತಿನಿಸು ಸೇರಿ ನೀರನ್ನು ಒದಗಿಸಿ ಪೊಲೀಸರಿಗೆ ನೆರವಾಗಿದ್ದಾರೆ.

ಈ ಮಾನವೀಯತೆ ಮೆರೆದ ವ್ಯಕ್ತಿಯನ್ನು ಗಿರೀಶ್ ಎಂದು ಗುರುತಿಸಲಾಗಿದೆ ತೆಂಗಿನ ಮರ ಏರುವ ಕಾಯಕವನ್ನು ಮಾಡುವ ಗಿರೀಶ್ ತಾವು ಕೂಡಿಟ್ಟ ಹಣದಲ್ಲಿ ಈ ಕೆಲಸವನ್ನು ಮಾಡುತ್ತಿದ್ದಾರೆ .ಇವರು ಉಟ್ಟ ಬಟ್ಟೆ ಕೊಂಚ ಹರಿದಿದ್ದರೂ ಇವರ ಹೃದಯ ವೈಶಾಲ್ಯತೆಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.ಅಲ್ಲದೆ ಈ ಲಾಕ್  ಡೌನ್ ಸಮಯದಲ್ಲಿ ಹಸಿದವರಿಗೆ ನೆರವಾಗಲು ಇತರರಿಗೆ ಪ್ರೇರಣೆಯಾಗಿದ್ದಾರೆ.

Comments