ಭಾರತದಲ್ಲಿ ಮುಸಲ್ಮಾನರ ಮೇಲೆ ದಾಳಿ ನಡೆಯುತ್ತಿದೆ ಎಂದು ಕಟ್ಟುಕಥೆ ಸೃಷ್ಠಿಸಿದವರನ್ನು ಜೈಲಿಗಟ್ಟಲಿದೆ ಕುವೈತ್ ಸರಕಾರ!

ಭಾರತದಲ್ಲಿ ಮುಸ್ಲಿಮರ ಮೇಲೆ ದಾಳಿ ನಡೆದಿದೆ ಮತ್ತು ಅದನ್ನು ಕುವೈಟ್‌ನ ಮಂತ್ರಿಗಳ ಮಂಡಳಿ ಖಂಡಿಸಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಕೆಲವು ಸುಳ್ಳು ಪೋಸ್ಟ್‌ಗಳು ಹಾಕಿಕೊಂಡ ನಂತರ, ನವದೆಹಲಿ ಮತ್ತು ಪಶ್ಚಿಮ ಏಷ್ಯಾ ರಾಷ್ಟ್ರ ಸರ್ಕಾರವು ಸೋಮವಾರ ಅದನ್ನು ಸ್ಪಷ್ಟಪಡಿಸಲು ಮತ್ತು ದ್ವಿಪಕ್ಷೀಯ ಸಂಬಂಧಗಳಿಗೆ ಕಿರಿಕಿರಿಯುಂಟುಮಾಡುವುದನ್ನು ತಡೆಯಲು ದಿಟ್ಟ ನಿಲುವು ಕೈಗೊಂಡಿತು.

ಭಾರತಕ್ಕೆ ಕುವೈತ್‌ನ ರಾಯಭಾರಿ ಜಸ್ಸೆಮ್ ಅಲ್-ನಜೀಮ್ ಅವರು  ಕೋವಿಡ್19 ನಿಯಂತ್ರಿಸಲು ಭಾರತವು ಮಾಡಿದ ಸಹಾಯದ ಬಗ್ಗೆ ಮುಕ್ತ ಕಂಠದಿಂದ ಶ್ಲಾಘಿಸಿದರು. ಉಭಯ ದೇಶಗಳ ನಡುವಿನ ಸಂಬಂಧದಲ್ಲಿ ಹಸ್ತಕ್ಷೇಪ ಮಾಡದಿರುವ ತತ್ವವನ್ನು ಒತ್ತಿ ಹೇಳಿದರು.  "ಕುವೈತ್ ಮತ್ತು ಭಾರತವು ತಮ್ಮ ವಿದೇಶಾಂಗ ನೀತಿಗಳಲ್ಲಿ ಯುಎನ್ ಚಾರ್ಟರ್ ಅನ್ನು ಗೌರವಿಸುವುದು, ಇತರ ದೇಶಗಳ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡದಿರುವುದು ಮತ್ತು ರಾಷ್ಟ್ರಗಳ ಸಾರ್ವಭೌಮತ್ವವನ್ನು ಗೌರವಿಸುವುದು ಮುಂತಾದ ಹಲವು ತತ್ವಗಳನ್ನು ಹಂಚಿಕೊಳ್ಳುತ್ತವೆ" ಎಂದು ಕುವೈತ್ ಸುದ್ದಿ ಸಂಸ್ಥೆ ಕುನಾ ಉಲ್ಲೇಖಿಸಿ ಅಲ್-ನಜೀಮ್ ಹೇಳಿದ್ದಾರೆ.

ಈಗಾಗಲೇ ಕುವೈತಿನ ಗುಪ್ತಚರ ಸಂಸ್ಥೆ ಈ ಬಗ್ಗೆ ಮಾಹಿತಿ ಪಡೆದು ಇದರಲ್ಲಿ ಹೆಚ್ಚಿನವರು ಭಾರತ ಮತ್ತು ಪಾಕಿಸ್ತಾನ ದಿಂದ ವಲಸೆ ಹೋದವರು, ಮತ್ತು ಇಂಥವರ ಬಗ್ಗೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.


Comments