ಪಾಲ್ಘರ್ ಸಂತರ ಹತ್ಯೆ ಖಂಡಿಸಿ ನಾಳೆ ದೇಶವ್ಯಾಪಿ ಉಪವಾಸ !

ಮಹಾರಾಷ್ಟ್ರದಲ್ಲಿ ನಡೆದ ಸಾಧುಗಳ ಸಾಮೂಹಿಕ ಹತ್ಯೆಯನ್ನು ಖಂಡಿಸಿ ನಾಳೆ ದೇಶವ್ಯಾಪಿ ಉಪವಾಸ  ಪ್ರತಿಭಟನೆ ನಡೆಸಲು ಹಿಂದೂ ಧರ್ಮ ಆಚಾರ್ಯ ಸಭಾ ಹಾಗೂ ವಿಶ್ವ ಹಿಂದೂ ಪರಿಷತ್ ನಿರ್ಧಾರ ಮಾಡಿದೆ .ಮಹಾರಾಷ್ಟ್ರದ ಪಾಲ್ಘರ್ನಲ್ಲಿ ತೀರಾ ಅಮಾನವೀಯವಾಗಿ ಜನರ ಗುಂಪೊಂದು ಸಾಮೂಹಿಕವಾಗಿ ಸಾಧುಗಳನ್ನು ಸುಳ್ಳು ಆರೋಪದ ಮೇಲೆ  ಹತ್ಯೆಗೈದಿತ್ತು.

 ಈ ಹತ್ಯೆಯ ಕುರಿತು ದೇಶದೆಲ್ಲೆಡೆ ಭಾರಿ ಆಕ್ರೋಶ ವ್ಯಕ್ತವಾಗಿತ್ತು ನಂತರ ಮಹಾರಾಷ್ಟ್ರ ಸರಕಾರ ಆರೋಪಿಗಳನ್ನು ಬಂಧಿಸಿತ್ತು ಈ ಆಕ್ರೋಶದ ಕಿಡಿ ಇನ್ನೂ ಕೂಡ  ಹಾಗೆ ಉಳಿದಿದ್ದು , ಇದೀಗ ರಾಷ್ಟ್ರವ್ಯಾಪಿ ಶ್ರದ್ಧಾಂಜಲಿ ಹಾಗೂ ಸಾತ್ವಿಕ ಪ್ರತಿಭಟನೆಗೆ ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಕರೆ ನೀಡಲಾಗಿದೆ .ದೀಪವೊಂದು ಹಚ್ಚುವ ಮೂಲಕ ಶ್ರದ್ದಾಂಜಲಿ ಸಮರ್ಪಣೆ ಅಥವಾ ಒಂದು ಹೊತ್ತು ಉಪವಾಸದ ಮೂಲಕ ಸಾತ್ವಿಕ ಪ್ರತಿಭಟನೆಗೆ ಸಂಘಟನೆ ಮನವಿ ಮಾಡಿದೆ. ಅಲ್ಲದೆ ತಾವುಗಳು ಎಲ್ಲಿದ್ದಿರೋ ಅಲ್ಲಿಂದಲೇ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಸಂಘಟನೆ ಕೇಳಿಕೊಂಡಿದೆ.

Comments