ಕೊರೊನಾ ಸೋಂಕು ಸಂಬಂಧಿಸಿ ಮೋದಿ ,ಅಮಿತ್ ಶಾ,ಮಂಗಳೂರು ಪೊಲೀಸ್ ಕಮಿಷನರ್ ಫೋಟೋಗಳನ್ನು ಹಾಕಿ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ, ಪ್ರಚೋದನಾಕಾರಿ ಸಂದೇಶ ಹರಡುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ನಗರ ಪೊಲೀಸರು ಬಂಧಿಸಿದ್ದಾರೆ.ಉರಿಮಜಲು ನಿವಾಸಿ ಅಬ್ದುಲ್ ಬಷೀರ್ ಯಾನೆ ನಿಸಾರ್ ಅಹಮ್ಮದ್ ಮತ್ತು ಪಣಕಜೆ ನಿವಾಸಿ ಮುಹಮ್ಮದ್ ಇಲ್ಯಾಸ್ ಬಂಧಿತ ಆರೋಪಿಗಳು.
ಆರೋಪಿಗಳು ದೇಶದ ಪ್ರಧಾನಿ ಮತ್ತು ಗೃಹ ಸಚಿವರ ಬಗ್ಗೆ ಕೂಡ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಸಂದೇಶ ಹಾಕಿದ್ದರು.ಈ ಬಗ್ಗೆ ನಗರ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ವಿಚಾರಣೆ ವೇಳೆ ಪಿಎಫ್‌ಐ, ಎಸ್‌ಡಿಪಿಐ ಜತೆಗಿನ ಸಂಬಂಧವನ್ನು ಒಪ್ಪಿಕೊಂಡಿದ್ದಾರೆ.ಮಂಗಳೂರು ನಗರ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments
Post a Comment