ಭಾರತದಲ್ಲಿ ಅತಿ ಹೆಚ್ಚು ಕೋರನ ಪೀಡಿತ ರಾಜ್ಯಗಳ ಪೈಕಿ ಮೂರನೇ ಸ್ಥಾನದಲ್ಲಿರುವ ಮಧ್ಯಪ್ರದೇಶದಲ್ಲಿ ಪರಿಸ್ಥಿತಿಯನ್ನು ನಿಭಾಯಿಸಲು ಆರೋಗ್ಯ ಸಚಿವರೇ ಇಲ್ಲವಾಗಿದೆ ಅಕ್ಷರಃ ಆರೋಗ್ಯ ಇಲಾಖೆ ಅನಾಥವಾಗಿದೆ .ಇಲಾಖೆಯಲ್ಲಿರುವ ಉನ್ನತಾಧಿಕಾರಿಗಳು ಕೊರೊನ ಪೀಡಿತರಾಗಿದ್ದಾರೆ, ಪ್ರಧಾನಿ ಮೋದಿಯವರು ಲಾಕ್ ಡೌನ್ ಘೋಷಿಸುವ ಮೊದಲು ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಕೆಡವಿ ಬಿಜೆಪಿ ಶಿವರಾಜ್ ಸಿಂಗ್ ನೇತೃತ್ವದಲ್ಲಿ ಸರ್ಕಾರ ರಚಿಸಿತ್ತು .ಮಾರ್ಚ್ರು 23ರಂದು ಅಧಿಕಾರ ಸ್ವೀಕರಿಸಿದ ಶಿವರಾಜ್ ಸಿಂಗ್ ಚೌಹಾಣ್ ಅವರು ಮಂತ್ರಿ ಮಂಡಲವನ್ನು ವಿಸ್ತರಿಸಲು ಸಾಧ್ಯವಾಗದೆ ಆರೋಗ್ಯ ಇಲಾಖೆ ಅನಾಥವಾಗಿದೆ.
ಅಧಿಕಾರ ಸ್ವೀಕರಿಸುವ ವೇಳೆ ರಾಜ್ಯದಲ್ಲಿ ಸೋಂಕು ಇರಲಿಲ್ಲ ಆದರೆ ನಂತರದ ವಾರದಲ್ಲಿ ಅಪಾಯಕಾರಿ ಸೋಂಕಿತ ರಾಜ್ಯವಾಗಿ ಮಧ್ಯಪ್ರದೇಶ ಹೊರಹೊಮ್ಮಿದೆ.ಸದ್ಯ ಐಎಎಸ್ ಅಧಿಕಾರಿಗಳು ವೈದ್ಯರು ಸೇರಿದಂತೆ ಇಲಾಖೆಯ ಕನಿಷ್ಠ 89ಸಿಬ್ಬಂದಿಗೆ ಇಲ್ಲಿ ಸೋಂಕು ತಗುಲಿದೆ ಅಲ್ಲದೆ 40 ಪೊಲೀಸ್ ಸಿಬ್ಬಂದಿ ಮತ್ತು ಅವರ ಕುಟುಂಬಸ್ಥರಿಗೆ ಸೋಂಕು ತಗುಲಿದ್ದು ಇದು ಮಧ್ಯಪ್ರದೇಶ ಶಿವರಾಜ್ ಸಿಂಗ್ ಚೌಹಾನ್ ನೇತೃತ್ವದ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ .

Comments
Post a Comment