ಮುಸ್ಲಿಮರ ವಿಚಾರದಲ್ಲಿ ಭಾರತದ ಕಾಲೆಳೆಯಲು ಬಂದ ಇಸ್ಲಾಮಿಕ್ ರಾಷ್ಟ್ರದ ಮಾನವ ಸಂಘಟನೆಯ ಬಾಯಿ ಮುಚ್ಚಿಸಿದ ಮುಕ್ತಾರ್ ಅಬ್ಬಾಸ್ ನಕ್ವಿ !

ನವದೆಹಲಿ  : ಭಾರತದಲ್ಲಿ ಮುಸ್ಲಿಮರ ವಿಚಾರದಲ್ಲಿ ಮಾನವ ಹಕ್ಕು ಉಲ್ಲಂಘನೆಯಾಗುತ್ತಿದೆ ಮತ್ತು ಇಸ್ಲಾಂಗೆ ಭಯ ಆವರಿಸಿದೆ ಎಂದು ಹೇಳಿಕೆ ನೀಡಿರುವ (OIC)ಇಸ್ಲಾಮಿಕ್ ಸಹಕಾರ ಮಾನವ ಹಕ್ಕುಗಳ ಸಂಘಟನೆಗೆ ಬಾಯಿ  ಮುಚ್ಚುವ ರೀತಿಯಲ್ಲಿ ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಕ್ವಿ ಉತ್ತರ ನೀಡಿದ್ದಾರೆ.ಭಾರತ ಮುಸ್ಲಿಮರಿಗೆ ಸ್ವರ್ಗವಿದ್ದಂತೆ ಈ ನೆಲದಲ್ಲಿ ಅನುಭವಿಸಿದಷ್ಟು ಸುರಕ್ಷಿತೆ ಮತ್ತೆಲ್ಲೂ ಅನುಭವಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಭಾರತದಲ್ಲಿರುವ ಮುಸ್ಲಿಮರನ್ನು ಬಹುಸಂಖ್ಯಾತರ ವಿರುದ್ಧ ಎತ್ತಿ ಕಟ್ಟಲು ಕೊಲ್ಲಿ ರಾಷ್ಟ್ರದ ಇಸ್ಲಾಮಿಕ್ ಸಂಘಟನೆಗಳು ಪ್ರಯತ್ನ ಪಡುತ್ತಿದೆ. ಇದು ಫಲ ನೀಡದು ಎಂದು ಖಡಕ್ಕಾಗಿ ಮುಕ್ತ ಅಬ್ಬಾಸ್ ನಕ್ವಿ ತಿರುಗೇಟು ನೀಡಿದ್ದಾರೆ .ಭಿನ್ನತೆಯ ಬಗ್ಗೆ ಮಾತನಾಡುವವರು ಗೆಳೆಯರಾಗಲು ಸಾಧ್ಯವಿಲ್ಲ  ಎಂದಿದ್ದಾರೆ .

ಭಾರತದಲ್ಲಿ ಆರೆಸ್ಸೆಸ್ ಸೇರಿ ಬಲಪಂಥೀಯ ಸಂಘಟನೆಯ ಕುರಿತಾಗಿ ಇಸ್ಲಾಮಿಕ್ ಸಂಘಟನೆ ಈ ಹಿಂದೆ ಕಿಡಿಕಾರಿದ ಕುರಿತು ಸಾಮಾಜಿಕ ಜಾಲತಾಣದಲ್ಲೂ ಕೊಲ್ಲಿ ರಾಷ್ಟ್ರದ ಮಾನವ ಸಂಘಟನೆ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ .ಪ್ರಜಾಪ್ರಭುತ್ವವೇ ಇಲ್ಲದ ಕೊಲ್ಲಿ ರಾಷ್ಟ್ರಗಳ ಮಾನವ ಸಂಘಟನೆ ಭಾರತಕ್ಕೆ ಜಾತ್ಯತೀತತೆಯನ್ನು ಕಲಿಸಲು ಬರುತ್ತಿದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದರೆ. ಇನ್ನೂ ಹಲವರು ಭಾರತೀಯರು ಅಖಂಡ ಭಾರತವನ್ನು ಒಡೆಯಲು ಕಿರುಬೆರಳಲ್ಲಿ ನಷ್ಟಿರುವ ಈ ಸಂಘಟನೆಯಿಂದ ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದ್ದಾರೆ.

Comments