ನಿಶಾ ಜಿಂದಾಲ್ ಅನ್ನು ಹುಡುಕಿ ಹೋದ ಪೊಲೀಸರಿಗೆ ಸಿಕ್ಕಿದ್ಯಾರು ನೋಡಿ!

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹೆಣ್ಣುಮಕ್ಕಳ ಹೆಸರಲ್ಲಿ ನಕಲಿ ಖಾತೆ ತೆರೆಯುವ ಬಹುದೊಡ್ಡ ಗುಂಪೇ ಭಾರತದಲ್ಲಿದೆ. ಹೆಣ್ಣು ಮಕ್ಕಳ ಹೆಸರಲ್ಲಿ ಖಾತೆ ತೆರೆದಲ್ಲಿ ಆದಷ್ಟು ಬೇಗ ಹೆಚ್ಚಿನ ಸ್ನೇಹಿತರನ್ನು ಸಂಪಾದಿಸಿಕೊಳ್ಳಬಹುದು ಎನ್ನುವ ಯೋಚನೆ ಇದರ ಹಿಂದಿದ್ದು, ಇದೀಗ ಇದೆ ಮಾದರಿಯಲ್ಲಿ ನಿಶಾ ಜಿಂದಾಲ್ ಹೆಸರಲ್ಲಿ ನಕಲಿ ಖಾತೆ ತೆರೆದಿದ್ದ ಯುವಕನೊಬ್ಬ ಪೊಲೀಸರ ಅತಿಥಿಯಾಗಿದ್ದಾನೆ.

 ಫೇಸ್ಬುಕ್ ನಲ್ಲಿ ನಿಶಾ ಜಿಂದಾಲ್ ಎನ್ನುವ ನಕಲಿ ಖಾತೆ ತೆರೆದು ಅದರಲ್ಲಿ ವೈಯಾರದ ಕಂಟೆಂಟ್ ಗಳನ್ನು ಹಾಕುವ ಮೂಲಕ 10000 ಕ್ಕೂ ಹೆಚ್ಚು ಅಭಿಮಾನಿಗಳನ್ನು ಹೊಂದಿರತಕ್ಕಂತಹ ವ್ಯಕ್ತಿಯ ಬಣ್ಣ ಇದೀಗ ಬಯಲಾಗಿದ್ದು, ಈ ಹೆಸರಿನ ಖಾತೆ ಹೊಂದಿರತಕ್ಕಂತಹ ವ್ಯಕ್ತಿ ಕಮ್ಯುನಲ್ ಪೋಸ್ಟ್ ಗಳನ್ನು ಹಾಕುತ್ತಿದ್ದು, ಈ ಹಿನ್ನೆಲೆಯಲ್ಲಿ ಆ ಖಾತೆದಾರನನ್ನು ಬಂಧಿಸಲು ಹೋದಾಗ ಅಸಲಿ ವಿಷಯ ಬಯಲಾಗಿದೆ. ನಿಶಾ ಜಿಂದಾಲ್ ಹೆಸರಿನಲ್ಲಿ ಯುವಕನೊಬ್ಬ ಖಾತೆ ತೆರೆದಿರುವುದು ಬಯಲಾಗಿದ್ದು, ಆತನನ್ನು ಬಂಧಿಸಿ ಪೊಲೀಸರು ನಾನೇ ನಿಶಾ ಜಿಂದಾಲ್ ಈಗ ನಾನು ಪೊಲೀಸ್ ಕಸ್ಟಡಿಯಲ್ಲಿ ಇದ್ದೇನೆ ಎಂದು ಪೋಸ್ಟ್ ಹಾಕಿಸಿದ್ದಾರೆ.

Comments