ಇದೀಗ ದೇಶದಾದ್ಯಂತ 2.0 ಲಾಕ್‌ಡೌನ್ ಆರಂಭವಾಗಿದ್ದು, ಮೊದಲ 21 ದಿನಗಳ ಲಾಕ್‌ಡೌನ್ ಬಹುತೇಕ ಯಶಸ್ವಿಯಾಗಿದ್ದು, ಭಾರತದಲ್ಲಿ ಮುಂಬಯಿ ಬಿಟ್ಟು ಸಮೂಹ ಮಟ್ಟದಲ್ಲಿ ಕೊರೊನಾ ಹಬ್ಬುವುದಕ್ಕೆ ತಡೆ ನೀಡಿದೆ. ಮೊದಲನೇ ಹಂತದ ಲಾಕ್‌ಡೌನ್ ನ ಮಧ್ಯಭಾಗದಲ್ಲಿ ತಬ್ಲೀಘಿ ಜಮಾತ್ ನ ಕಾರ್ಯಕರ್ತರಿಂದಾಗಿ ದೇಶದಲ್ಲಿ ಕೊರೊನಾ ಹಬ್ಬಿದ್ದು, ಅವರ ಅಸಹಕಾರದಿಂದಾಗಿ ಇಂದು ದೇಶದಲ್ಲಿ ಎರಡನೆಯ ಹಂತದ ಲಾಕ್‌ಡೌನ್ ಘೋಷಣೆಯಾಗಿದೆ.
ಈ ಲಾಕ್‌ಡೌನ್ ಸಮಯವನ್ನು ಭಾರತಿಯರು ವಿಭಿನ್ನವಾಗಿ ತಮ್ಮ ಕುಟುಂಬ ಸದಸ್ಯರೊಂದಿಗೆ ಕಳೆಯುತ್ತಿದ್ದು, ಮನೆಯೊಳಗೆ ಇದ್ದು ಸಮಯ ಕಳೆಯಲು ಬಹುತೇಕರು ಏನಾದರೊಂದು ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ. ಇದೀಗ ಈ ಲಾಕ್‌ಡೌನ್ ಸಮಯವನ್ನು ಸದುಪಯೋಗ ಪಡಿಸುವ ನಿಟ್ಟಿನಲ್ಲಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಮಾಸ್ಟರ್ ಪ್ಲ್ಯಾನ್ ಒಂದನ್ನು ರೂಪಿಸುತ್ತಿದ್ದು, ಈ ವಿಚಾರ ಸರ್ವತ್ರ ಮೆಚ್ಚುಗೆಗೆ ಪಾತ್ರವಾಗಿದೆ.
ಪ್ರಸ್ತುತ ನಡೆಯುತ್ತಿರುವ ಲಾಕ್‌ಡೌನ್ ನಿಂದಾಗಿ ರಾಷ್ಟ್ರೀಯ ಹೆದ್ದಾರಿಗಳು ಸೇರಿದಂತೆ ಭಾರತದ ರಸ್ತೆಗಳಲ್ಲಿ ಪೊಲೀಸ್ ಇಲಾಖೆ ಸೇರಿದಂತೆ ಇತರ ಸೇವಾ ವಲಯಗಳನ್ನು ಹೊರತುಪಡಿಸಿ ಇತರ ವಾಹನಗಳು ರಸ್ತೆಗೆ ಇಳಿಯುತ್ತಿಲ್ಲವಾದುದ್ದರಿಂದ ರಸ್ತೆಗಳೆಲ್ಲಾ ಖಾಲಿ ಹೊಡೆಯುತ್ತಿದ್ದು, ಈ ಸಮಯವನ್ನು ಸದುಪಯೋಗ ಪಡಿಸುವ ದೃಷ್ಟಿಯಿಂದ ಹಾಗೂ ದಿನಗೂಲಿ ಕಾರ್ಮಿಕರ ನೆರವಿಗೆ ಧಾವಿಸುವ ದೃಷ್ಟಿಯಿಂದ ಹೊಸ ಯೋಜನೆಯನ್ನು ಜಾರಿಗೆ ತರಲು ನಿರ್ಧರಿಸಿದ್ದಾರೆ.
ಈ ಲಾಕ್‌ಡೌನ್ ಸಮಯವನ್ನು ಸದ್ಬಳಕೆ ಮಾಡುವ ನಿಟ್ಟಿನಲ್ಲಿ ನಿತಿನ್ ಗಡ್ಕರಿ ರಾಷ್ಟ್ರೀಯ ಹೆದ್ದಾರಿ ದುರಸ್ತಿಗೊಳಿಸುವ ಯೋಜನೆಯನ್ನು ಪುನಾರರಂಭಿಸಲು ಮುಂದಾಗಿದ್ದಾರೆ. ಖಾಲಿ ಇರುವ ಹೆದ್ದಾರಿಗಳಲ್ಲಿ ಈ ಹಿಂದಿಗಿಂತಲೂ 2 ರಿಂದ 3 ಪಟ್ಟು ವೇಗವಾಗಿ ಕೆಲಸ ಪೂರ್ಣಗೊಳಿಸಿ ರಸ್ತೆಯ ಕೆಲಸವನ್ನು ಪೂರ್ಣಗೊಳಿಸುವುದರ ಜೊತೆಜೊತೆಗೆ ಪ್ರಸ್ತುತ ಕೆಲಸವಿಲ್ಲದೆ ಸಮಸ್ಯೆಯಲ್ಲಿರುವ ದಿನಗೂಲಿ ಕಾರ್ಮಿಕರ ನೆರವಿಗೆ ಧಾವಿಸುವ ದೃಷ್ಟಿಯಿಂದ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ನಿತಿನ್ ಗಡ್ಕರಿ ಮುಂದಾಗಿದ್ದು, ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.

Comments
Post a Comment