ಅನಾರೋಗ್ಯಕ್ಕೆ ಈಡಾಗಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜೊಂಗ್!

ಉತ್ತರ ಕೋರಿಯಾದ ಹುಚ್ಚು ದೊರೆಯೆಂದೇ ಇತರ ದೇಶಗಳ ಜನರಿಂದ ಕರೆಯಲ್ಪಡುವ ಅಲ್ಲಿನ ಅಧ್ಯಕ್ಷ ಕಿಮ್ ಜೊಂಗ್ ಉನ್ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದಾನೆ ಎನ್ನುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ ಅಮೆರಿಕಾದ ಮೂಲಗಳು ಈ ವಿಚಾರವನ್ನು ಖಚಿತಪಡಿಸಿದ್ದು, ಆತನಿಗೆ ಕೊರೊನಾ ಸೋಂಕು ತಗುಲಿರಬಹುದು ಅಥವಾ ಯಾವುದೋ ಶಸ್ತ್ರಚಿಕಿತ್ಸೆ ಬಳಿಕ ಆದ ತಪ್ಪಿನಿಂದಾಗಿ ಆತ ಅನಾರೋಗ್ಯಕ್ಕೆ ಈಡಾಗಿದ್ದಾನೆ ಎನ್ನುವ ಶಂಕೆ ವ್ಯಕ್ತವಾಗುತ್ತಿದೆ.

ಈ ಬಗ್ಗೆ ಅಮೆರಿಕದ ಹಲವು ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗಿದ್ದು ಈ ಬಗ್ಗೆ ಉತ್ತರ ಕೊರಿಯಾ ಅಧಿಕೃತವಾದ ಪ್ರಕಟಣೆಯನ್ನು ಹೊರಡಿಸಿದ ನಂತರವೇ ಈ ಬಗ್ಗೆ ಖಚಿತ ಮಾಹಿತಿ ದೊರೆಯಲಿದೆ.ಆದರೆ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಶತ್ರು ರಾಷ್ಟ್ರದ ನಾಯಕನ ಅನಾರೋಗ್ಯದ ಕುರಿತು ಬಂದ ವರದಿಗಳನ್ನು ದಕ್ಷಿಣ ಕೊರಿಯಾ ತಿರಸ್ಕರಿಸಿದೆ. ಕಿಮ್ ಜಾಂಗ್ ಊನ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂಬ ವರದಿಯನ್ನು ದ.ಕೊರಿಯಾ ಕೇವಲ ವದಂತಿ ಎಂದು ಅಲ್ಲಗಳೆದಿದೆ.

Comments