ಯುಎಇ ರಾಜಕುಮಾರಿ ನೀಡಿದ ಸ್ಪಷ್ಟೀಕರಣ : ಸುಳ್ಳು ಸುದ್ದಿ ಹಬ್ಬಿಸಿ ಸಿಕ್ಕಿಬಿದ್ದ ಹಲವರು

ವಿಶ್ವದಾದ್ಯಂತ ಕೊರೊನಾ ಮಹಾಮಾರಿ‌ ಜನರ ಬದುಕನ್ನು ಬಲಿಪಡೆದುಕೊಳ್ಳುತ್ತಿರುವ ಸಂದರ್ಭದಲ್ಲಿ, ಕೆಲವರು ಈ ವಿಚಾರದಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ಭಾರತದ ಹೆಸರಿಗೆ ಮಸಿಬಳಿಯುವ ಕೆಲಸಕ್ಕೆ ಕೈ ಹಾಕಿದ್ದಾರೆ.ಭಾರತದಲ್ಲಿ ಕೊರೊನ ಸೋಂಕು ವಿಚಾರದಲ್ಲಿ ಮುಸ್ಲಿಮರನ್ನು ಗುರಿ ಮಾಡಲಾಗುತ್ತಿದೆ ಮತ್ತು ಇಸ್ಲಾಂ ಭಯ ಎಂಬ ಹೇಳಿಕೆಯ ಅಡಿಯಲ್ಲಿ ಸಾಮಾಜಿಕ ಜಾಲ ತಾಣದಲ್ಲಿ ಸುಳ್ಳು ಸುದ್ದಿ ಹಬ್ಬಲಾಗಿತ್ತು.ಇದಕ್ಕೆ ಪ್ರಮುಖವಾಗಿ ಕೊಲ್ಲಿರಾಷ್ಟ್ರದ ಪ್ರಮುಖ ಮುಸ್ಲಿಮರ ಹೆಸರನ್ನು ಬಳಸಲಾಗಿತ್ತು.



ಕಳೆದ ಕೆಲವು ದಿನಗಳಿಂದ ಕೊಲ್ಲಿ ರಾಷ್ಟ್ರದ ರಾಜಕುಮಾರಿ ಎಂಬ ಹೆಸರಿನ ಟ್ವಿಟರ್ ಖಾತೆಯಲ್ಲಿ  ಕೂಡ ಭಾರತೀಯರ ಮೇಲೆ ಸರಣಿ ಟ್ವಿಟ್ ಗಳನ್ನು ಮಾಡುವ ಮೂಲಕ ಭಾರತದಲ್ಲಿ ಮುಸ್ಲಿಮರ  ಮೇಲೆ ದೌರ್ಜನ್ಯ ಎಸಗಲಾಗುತಿದೆ.ಹೀಗೆ ಆದರೆ ನಾವು ಕೊಲ್ಲಿರಾಷ್ಟ್ರದಲ್ಲಿರುವ ಹಿಂದುಗಳನ್ನು ವಾಪಸ್ ಕಳುಹಿಸುವುದಾಗಿ ಹೇಳಿ ಅಂತರಾಷ್ಟ್ರೀಯ ಮಟ್ಟದಲ್ಲಿ ಮುಸ್ಲಿಮರನ್ನು  ಎತ್ತಿ ಕಟ್ಟುವ ಬಹುದೊಡ್ಡ ಹುನ್ನಾರ ನಡೆದಿತ್ತು.ಇದೀಗ ಇಂತ ಮುಖವಾಡ ಕಳಚಿ ಬಿದಿದ್ದು .‌ ಈ ಖಾತೆ ಮೂಲತಃ  ಪಾಕಿಸ್ತಾನ  ಮೂಲದಾಗಿದ್ದು, ಕೊಲ್ಲಿ ರಾಷ್ಟ್ರದ ರಾಜಕೂಮಾರಿ ಹೆಸರಲಿ ಸೃಷ್ಟಿ ಮಾಡಿದ ನಕಲಿ ಖಾತೆ ಇದಾಗಿದೆ. ಈ ಬಗ್ಗೆ ಭಾರತೀಯ ಮೂಲದ ಸೈಬರ್ ಹ್ಯಾಕರ್ ಅನ್ಸುಲ್ ಸಕ್ಸೆನಾ ಸಾಕ್ಷಿ ಸಹಿತ ಇದನ್ನು ಸಾಬೀತು ಪಡಿಸಿದ್ದಾರೆ.‌ಅಲ್ಲದೆ ಇದಕ್ಕೆ ಪೂರಕವಾಗುವಂತೆ ಒಮಾನ್ ರಾಜಕುಮಾರಿ ಮೋನಾ ಬಿಂತ್ ಫಹದ್ ಅಲ್ ಸೈದ್ ಈ ಬಗ್ಗೆ ಹೇಳಿಕೆ ನೀಡಿದ್ದು, “ನನ್ನ ನಕಲಿ ಖಾತೆಯ ಮೂಲಕ ವಿವಾದಿತ ಪೋಸ್ಟ್ ಅನ್ನು ಪ್ರಕಟಿಸಲಾಗಿದೆ, ನನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ” ಎಂದು ಹೇಳಿದ್ದಾರೆ. ಇಂತಹ ವಿಷಯಗಳು ಒಮಾನಿ ಸಮಾಜಕ್ಕೆ ಸ್ವೀಕಾರಾರ್ಹವಲ್ಲ. ನಾನು socialhhmonaalsaid (Instagram) ಮತ್ತು @MonaFahad13 (Twitter ) ಮೂಲಕ ಮಾತ್ರ ಸಾಮಾಜಿಕ ಮಾಧ್ಯಮದಲ್ಲಿ ಅಸ್ತಿತ್ವದಲ್ಲಿದ್ದೇನೆ ಎಂದು ಖಚಿತಪಡಿಸಿದ್ದಾರೆ.

ಒಮಾನ್ ರಾಜಕುಮಾರಿ ಈ ಮಾಹಿತಿಯನ್ನು ಹೊರ ಹಾಕುತ್ತಿದ್ದಂತೆ ಅವರ ಹೆಸರಲ್ಲಿ ತೆರೆದ ಹಲವು ಖಾತೆಗಳು ನಿಷ್ಕ್ರಿಯ ಗೊಂಡಿದೆ .ಇನ್ನು ಈ ಸಂಬಂಧ ಸುದ್ದಿ ಪ್ರಕಟಿಸಿದ  ಕರ್ನಾಟಕ  ಮತೀಯ ತೀವ್ರಗಾಮಿ  ಮಾಧ್ಯಮಗಳಿಗೆ ತೀವ್ರ ಮುಜುಗರ ಒಳಗಾಗಿದ್ದು .ಸದ್ಯ ಈ ಬಗ್ಗೆ ಕಾನೂನು ಕ್ರಮ ಜರುಗುಸುವಂತೆ ಕೇಂದ್ರ ಗ್ರಹಸಚಿವರಲ್ಲಿ ಹಲವರು ಆಗ್ರಹಿಸಲಾಗಿದೆ .ಇನ್ನು  ಕೊಲ್ಲಿ ರಾಷ್ಟ್ರದಲ್ಲಿ ದುಡಿಯುತ್ತಿರುವ ಭಾರತೀಯ ಯವಕರ ಮೇಲೆ ದಾಳಿ ಮಾಡುವಂತೆ ಪ್ರಚೋದಮಾತ್ಮಕವಾಗಿ ಬರಹಗಳನ್ನು ಬಿತ್ತರಿಸುವ ಮತೀಯ ತೀವ್ರಗಾಮಿಗಳ ವಿರುದ್ಧ  ಪೋಲಿಸ್ ಇಲಾಖೆ, ಮಾನವ ಹಕ್ಕುಗಳು ಆಯೋಗ ನಿದ್ದೆಗೆ ಜಾರಿದ್ದು ಮಾತ್ರ ದುರಂತವೆನಿಸಿದೆ

Comments