ಪಾಕಿಸ್ತಾನ : 60 ವರ್ಷದ ಹಿರಿಯ ಗರ್ಭ ಧರಿಸಿದ್ದಾನೆ ಎಂದು ರಿಪೋರ್ಟ್ ನೀಡಿದ್ದ ಲ್ಯಾಬ್ ಮಾಲೀಕನ ಬಂಧನ

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ವಿಲಕ್ಷಣ ಘಟನೆಯೊಂದು ವರದಿಯಾಗಿದೆ .ಪಂಜಾಬ್ ಪ್ರಾಂತ್ಯದ ಖನೇವಾಲ್ ಜಿಲ್ಲೆಯ  ಖಾಸಗಿ ಪ್ರಯೋಗಾಲಯದಲ್ಲಿ 60ವರ್ಷದ ಹಿರಿಯ ವ್ಯಕ್ತಿ ಅಲ್ಲಾ ಬಿಟ್ಟಾ ಅವರು  ಗರ್ಭ ಧರಿಸಿದ್ದಾರೆ ರಿಪೋರ್ಟ್ ನೀಡಲಾಗಿದೆ.ವರದಿಗಳ ಪ್ರಕಾರ, ಖಾನೇವಾಲ್‌ ಖಾಸಗಿ  ಪ್ರಯೋಗಾಲ ದಲ್ಲಿ  ವ್ಯಕ್ತಿಯ  ಮೂತ್ರ ಪರೀಕ್ಷೆಯು ನಂತರ ಆತ  ಗರ್ಭಧಾರಣೆ ಮಾಡಿದ್ದಾನೆ ಎಂಬ  ವರದಿಗಳನ್ನು ನೀಡಿತ್ತು.ಈ ಸುದ್ದಿ ಕಾಡ್ಗಿಚ್ಚಿನಂತೆ ಹರಡುದಿದ್ದಂತೆ ಎಚ್ಚೆತ್ತ ಖಾನೇವಾಲ್ ಜಿಲ್ಲಾ ಆಯುಕ್ತರು ಈಗ ಖಾಸಗಿ ಲ್ಯಾಬ್‌ಗೆ ಮೊಹರು ಹಾಕಿ ಬೀಗ ಜಡಿದ್ದಾರೆ.ಈ ಸಂಬಂಧ ಪೊಲೀಸರು ಲ್ಯಾಬ್  ಮಾಲೀಕ ಅಮೀನ್‌ನನ್ನು ಬಂಧಿಸಿದ್ದಾರೆ.

ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಈ ಖಾಸಗಿ ಲ್ಯಾಬ್  ಸೂಕ್ತವಾದ ಪರವಾನಗಿಯನ್ನು ಹೊಂದಿಲ್ಲ ಮತ್ತು ಅಮೀನ್ ಈ ಹಿಂದೆ ಆಸ್ಪತ್ರೆಯ ರಕ್ತ ಪ್ರಯೋಗಾಲಯದಲ್ಲಿ ತಂತ್ರಜ್ಞಾನ ನಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾನೆ ಎಂದು ತಿಳಿಸಿದ್ದಾರೆ.ಈ ಬಗ್ಗೆ ಪಾಕಿಸ್ತಾನ ಪತ್ರಕರ್ತೆಯೊಬ್ಬರು ಟ್ವಿಟ್ಟರ್ ನಲ್ಲಿ ಲ್ಯಾಬ್ ರಿಪೋರ್ಟ್ ಅನ್ನು ಹಂಚಿಕೊಂಡಿದ್ದು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಎಲ್ಲರೂ ಪಾಕಿಸ್ತಾನದ ಕಾಲೆಳೆಯುತ್ತಿದ್ದಾರೆ

Comments