ತಬ್ಲೀಘಿ ಜಮಾತ್ ಕಾರಣದಿಂದ ಪಾಕಿಸ್ತಾನದಲ್ಲೂ ಕೊರೊನ ವೈರಸ್ ಹರಡಿಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪಾಕಿಸ್ತಾನ

ನವದೆಹಲಿಯ  ನಿಜಾಮುದ್ದೀನ್ ಮರ್ಕಜ್  ಮಸೀದಿಯಲ್ಲಿ ನಡೆದ ಜಮಾತ್ ಸಮಾವೇಶದಲ್ಲಿ ಭಾಗಿಯಾದವರ ಹೆಚ್ಚಿನವರಲ್ಲಿ  ಕೊರೊನ  ಸೋಂಕು ಕಾಣಿಸಿಕೊಂಡು ಈ ಪೈಕಿ ಹಲವರು ತಲೆಮರೆಸಿಕೊಂಡು ಆತಂಕಕ್ಕೆ ಕಾರಣವಾದ ಬೆನ್ನಲ್ಲೇ ಇದೀಗ ಪಾಕಿಸ್ತಾನ ಕೂಡ ತನ್ನ ದೇಶದಲ್ಲಿ ಕೊರೊನ  ವೈರಸ್ ಹರಡಲು ತಬ್ಲೀಘಿ ಜಮಾತ್ ಸಮಾವೇಶ ಕಾರಣ ಎಂದು ಒಪ್ಪಿಕೊಂಡಿದೆ.ಪಾಕಿಸ್ತಾನದ ಪತ್ರಿಕೆ ಡಾನ್ ವರದಿಯ ಪ್ರಕಾರ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ವಿರೋಧದ ನಡುವೆಯೂ ಜಮಾತ್ ಭಾರಿ ಸಮಾವೇಶ ನಡೆಸಿತ್ತು.

 ಈ ಸಮಾವೇಶದಲ್ಲಿ ಎಪ್ಪತ್ತು ಸಾವಿರದಿಂದ ಎಂಬತ್ತು ಸಾವಿರ ಜಮಾತ್ ಕಾರ್ಯಕರ್ತರು ಭಾಗವಹಿಸಿದ್ದರು ಮಾರ್ಚ್ 10 ರಂದು ನಡೆದ ಈ ಸಮಾವೇಶದಲ್ಲಿ 250000ಸಾವಿರಕ್ಕೂ ಹೆಚ್ಚು ಜನ ಈ ಸಮಾವೇಶದಲ್ಲಿ ಭಾಗಿಯಾಗಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ ಎಂದು ಡಾನ್ ವರದಿ ಮಾಡಿದೆ .ಈ ಪೈಕಿ ಮೂರು ಸಾವಿರ ಜನ ವಿದೇಶಿಗರು ನಲವತ್ತು ದೇಶದಿಂದ ಬಂದಿರುವುದಾಗಿ ತಿಳಿಸಿದೆ.ಪಂಜಾಬ್ ಪ್ರಾಂತ್ಯದ ರೈವಿಂಡ್  ಪ್ರದೇಶದಲ್ಲಿ ಎರಡು ಲಕ್ಷ ಜನಸಂಖ್ಯೆ  ಇದ್ದು ಪ್ರದೇಶದಲ್ಲಿ ಹಲವಾರು ಜಮಾತ್ ಕಾರ್ಯಕರ್ತರು ಕೋರನ  ಸೋಂಕು ತಗುಲಿದ್ದರಿಂದ  ಪ್ರದೇಶವನ್ನು ಸಂಪೂರ್ಣವಾಗಿ ಸದ್ಯಕ್ಕೆ ಲಾಕ್  ಡೌನ್ ನಡೆಸಲಾಗಿದೆ .ಸದ್ಯ ತಬ್ಲೀಘಿ ಸಮಾವೇಶದ ಬಗ್ಗೆ ಇಸ್ಲಾಮಿಕ್  ದೇಶದಲ್ಲೂ ಆಕ್ರೋಶ ವ್ಯಕ್ತವಾಗಿದೆ ಆದರೆ ಭಾರತದಲ್ಲಿ ಈ ಸಮಾವೇಶದಲ್ಲಿ ಭಾಗಿಯಾದ ತಬ್ಲೀಘಿ ಗಳ ಪರ ಕೆಲ ರಾಜಕೀಯ ಮುಖಂಡರು ಇನ್ನೂ ಕೂಡ ಬ್ಯಾಟಿಂಗ್ ನಡೆಸುವುದು ದುರಂತ ಎಂದೇ ಹೇಳಬಹುದು.

Comments