ಪಾಕ್ ಪ್ರಧಾನಿ ಜೊತೆ ಕಾಣಿಸಿಕೊಂಡವನಿಗೆ ಕೋರನ ಸೋಂಕು : ಹೆದರಿ ಕೋಣೆ ಸೇರಿದ ಇಮ್ರಾನ್ ಖಾನ್ !

ಜಗತ್ತಿನ ಹಲವು ದೇಶಗಳಿಗೆ ವ್ಯಾಪಿಸಿರುವ ಕೋರೋಣ ವೈರಸ್ ಸೋಂಕು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಕೂಡ ಬೆಚ್ಚಿ ಬೀಳಿಸಿದೆ .ಇದಕ್ಕೆ ಪ್ರಮುಖ ಕಾರಣವೆಂದರೆ ಏಪ್ರಿಲ್ ಹದಿನೈದು ರಂದು ಇಮ್ರಾನ್ ಖಾನ್ ಅವರನ್ನು ಭೇಟಿಯಾದ ವ್ಯಕ್ತಿಗೆ ಇದೀಗ ಕೋರನ ಸೋಂಕು ದೃಢಪಟ್ಟಿದೆ.ಈ ಕಾರಣದಿಂದ ಇಮ್ರಾನ್ ಖಾನ್ ಅವರು ತಮ್ಮ ಇಸ್ಲಾಮಾಬಾದ್ನ ಮನೆಯಲ್ಲೇ ಕ್ವಾರಂಟೈನ್ ನಲ್ಲಿದ್ದಾರೆ .ಇಮ್ರಾನ್ ಖಾನ್ ಅವರು ಎಡಿ ಫೌಂಡೇಶನ್ನ ಅಧ್ಯಕ್ಷ ಫೈಸಲ್ ಎಂಬುವವರನ್ನು ಒಂದು ಕೋಟಿ ರು ಚೆಕ್ ಪಡೆಯುವ ವೇಳೆ ಭೇಟಿಯಾಗಿದ್ದರು. ಈ ಚೆಕ್ಕನ್ನು ಸ್ವತಃ ಇಮ್ರಾನ್ ಖಾನ್ ಸ್ವೀಕರಿಸಿದ್ದರು .ಇದೀಗ ಫೈಸಲ್ ಅವರಿಗೆ ಕೊರೊನ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಇಮ್ರಾನ್ ಖಾನ್ ಅವರು ಕೂಡ ಸೋಂಕಿನ ಭೀತಿ ಎದುರಿಸುತ್ತಿದ್ದು ಕೊರೊನ ಪರೀಕ್ಷೆಗೆ ಒಳಪಡಲಿದ್ದಾರೆ ಎಂದು ವರದಿಗಳು ತಿಳಿಸಿವೆ .

Comments