ಅಮೇರಿಕಾ ಆದೇಶದಂತೆ ಮಸೀದಿಗಳನ್ನು ಮುಚ್ಚಲಾಗುತ್ತಿದೆ ಎಂದು ಆರೋಪ ಮಾಡಿದ ಪಾಕ್ ಮೌಲ್ವಿಗಳು

ಕೊರೋನಾವೈರಸ್ ಉಲ್ಬಣದಿಂದಾಗಿ ಮಸೀದಿಗಳಲ್ಲಿ ಧಾರ್ಮಿಕ ಸಭೆ ನಿಷೇಧದ ವಿರುದ್ಧ ಪಾಕ್ ಧರ್ಮಗುರುಗಳು 
ಇಮ್ರಾನ್ ಖಾನ್ ಸರಕಾರಕ್ಕೆ  ಎಚ್ಚರಿಕೆ ನೀಡಿದ್ದಾರೆ. ಅಧಿಕಾರಿಗಳು ಧಾರ್ಮಿಕ ನಿಯಮಗಳನ್ನು ಪಾಲಿಸಬೇಕು, ಮಸೀದಿಗಳಲ್ಲಿ ಅಲ್ಲಾಹುವಿನಿಂದ ಕ್ಷಮೆ ಕೋರಲು ಹೆಚ್ಚಿನ ಸಂಖ್ಯೆಯ  ಆರಾಧಕರಿಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿದ್ದಾರೆ.  ಪಾಕಿಸ್ತಾನದಲ್ಲಿ 5, 715ಮಂದಿಯಲ್ಲಿ  ಕೊರೋನಾವೈರಸ್ ತಗಲಿದ್ದು, ಈ ಸೋಂಕು ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಮಸೀದಿಗಳಲ್ಲಿ ಧಾರ್ಮಿಕ ಸಭೆ, ಪ್ರಾರ್ಥನೆಗಳನ್ನು ಸರ್ಕಾರ ನಿಷೇಧಿಸಿದೆ. ಐದಕ್ಕಿಂತಲೂ ಹೆಚ್ಚಿನ ಸಂಖ್ಯೆ ಜನರು ಒಂದೆಡೆ ಸೇರುವಂತಿಲ್ಲ ಎಂದು ನಿರ್ಬಂಧಿಸಲಾಗಿದೆ.

ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸರ್ಕಾರ ಮನವಿ ಮಾಡಿದ್ದರೂ ಸಹ, ಇಸ್ಲಾಮಾಬಾದ್ ಹಾಗೂ ರಾವಲ್ಫಿಂಡಿಯ 53 ಹಿರಿಯ ಧರ್ಮಗುರುಗಳು ಜಾಮಿಯಾ ದಾರುಲ್ ಉಲೂಮ್  ಜಾಕ್ರಿಯಾದಲ್ಲಿ ಸೇರಿ ಮಸೀದಿಗಳಲ್ಲಿ ಧಾರ್ಮಿಕ ಸಭೆ, ಪ್ರಾರ್ಥನೆ ನಿಷೇಧ ಸಂಬಂಧ ಚರ್ಚೆ ನಡೆಸಿದ್ದಾರೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.

ವಿವಿಧ ಗುಂಪುಗಳನ್ನು ಪ್ರತಿನಿಧಿಸುವ ಮೌಲಿಗಳು, ನಿಷೇಧಿತ ಗುಂಪುಗಳು, ರಾಜಕೀಯ ಮತ್ತು ರಾಜಕೀಯೆತರ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದು, ಸರ್ಕಾರದ ಮುಖಂಡರು ಧಾರ್ಮಿಕ ನಿಯಮಗಳನ್ನು ಪಾಲಿಸಬೇಕು ಮತ್ತು ಆರಾಧಕರು ಅಲ್ಲಾಹುವಿನ ಬಳಿ ಕ್ಷಮೆಯಾಚಿಸಲು ಅವಕಾಶ ಮಾಡಿಕೊಡಬೇಕು ,ಒಂದು ಸರ್ಕಾರೀ ಅಧಿಕಾರಿಗಳು ಮಸಿಗಳನ್ನು ಮುಚ್ಚಲು ಬಂದರೆ ಅಂತವರ ಮೇಲೆ ದಾಳಿ ಮಾಡಲು ಮೌಲ್ವಿಗಳು ಕುಮ್ಮಕ್ಕು ನೀಡಿದ್ದಾರೆ.ಅಲ್ಲದೆ ಮಸೀದಿಗಳನ್ನು ಅಮೇರಿಕಾ ಆದೇಶದಂತೆ ಇಮ್ರಾನ್ ಖಾನ್ ಸರ್ಕಾರ ಮುಚ್ಚುತಿದೆ ಎಂದು ಮೌಲ್ವಿಗಳು ಆರೋಪಿಸಿದ್ದಾರೆ.


Comments