ಕೊಲ್ಲಿ ರಾಷ್ಟ್ರದಲ್ಲಿರುವ ಭಾರತೀಯರು ಯಾರೂ ಆತಂಕಪಡಬೇಕಿಲ್ಲ ನಿಮ್ಮದೊಂದಿಗಿದೆ ಭಾರತ ಸರಕಾರ

ಇತ್ತೀಚಿನ ದಿನಗಳಲ್ಲಿ ನಡೆದ ಬೆಳವಣಿಗೆಯಲ್ಲಿ ಕೊಲ್ಲಿ  ರಾಷ್ಟ್ರಗಳಲ್ಲಿ ಭಾರತೀಯರನ್ನು ಗುರಿಯಾಗಿಸಿ ಪಾಕಿಸ್ತಾನ ಪ್ರೇರಿತ ವ್ಯಕ್ತಿಗಳು ಭಾರತೀಯರನ್ನು ಗುರಿಯಾಗಿಸಿ ಪ್ರಮುಖವಾಗಿ ಹಿಂದುಗಳನ್ನು ಗುರಿಯಾಗಿಸಿ ಕೋಮು ಸಮಸ್ಯೆಯನ್ನು ಸೃಷ್ಟಿಸುವ  ವಾತಾವರಣವನ್ನು ನಿರ್ಮಾಣ ಮಾಡಿದ್ದವು.ಈ ಸಂಬಂಧ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ವಿದೇಶಾಂಗ ಸಚಿವ ಎಸ್ ಜೈಶಂಕರ್ ಸ್ವತಃ  ಮುಸ್ಲಿಂ ರಾಷ್ಟ್ರದ ನಾಯಕರೊಂದಿಗೆ ಕರೆ ಮಾಡಿ ಮಾತನಾಡಿದ್ದಾರೆ ಮತ್ತು ಈ ಕುರಿತು ಸ್ಪಷ್ಟನೆಯನ್ನು ಕೇಳಿದ್ದಾರೆ.ಮತ್ತು ಕೊಲ್ಲಿ ರಾಷ್ಟ್ರದಲ್ಲಿರುವ  ಭಾರತೀಯರು ಯಾರೂ ಈ ಬಗ್ಗೆ ಆತಂಕಪಡಬೇಕಿಲ್ಲ ಎಂಬ ಅಭಯವನ್ನು ಭಾರತ ಸರ್ಕಾರ ನೀಡಿದೆ ಎಂದು ವರದಿ ಆಗಿದೆ.

ಪ್ರಮುಖವಾಗಿ ಹಲವು ದಿನಗಳಿಂದ ಟ್ವಿಟರ್ ನ ನಕಲಿ ಹ್ಯಾಂಡಲ್ ಗಳಲ್ಲಿ ಹರಡುತ್ತಿರುವ ಭಾರತ ವಿರೋಧಿ, ಇಸ್ಲಾಮೋಫೋಬಿಯಾ ಆರೋಪದ ಕುರಿತ ಟ್ವೀಟ್ ಗಳು ಗಲ್ಫ್ ನಲ್ಲಿರುವ ಭಾರತೀಯರಿಗಷ್ಟೇ ಅಲ್ಲದೇ ರಾಷ್ಟ್ರಗಳ ನಡುವಿನ ಸೌಹಾರ್ದಯುತ ಸಂಬಂಧಕ್ಕೂ ಕುತ್ತು ತರುತ್ತಿತ್ತು. ಈ ಹಿನ್ನೆಲೆಯಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಗಲ್ಫ್ ರಾಷ್ಟ್ರಗಳ ವಿದೇಶಾಂಗ ಸಚಿವರೊಂದಿಗೆ ಖುದ್ದು ಮಾತನಾಡಿದ್ದು, ಭಾರತ-ಗಲ್ಫ್ ರಾಷ್ಟ್ರಗಳ ಸಂಬಂಧ ಹಿಂದಿನಂತೆಯೇ ಮುಂದುವರೆಯಲಿದೆ ಎಂದು ಹೇಳಿದ್ದಾರೆ.

ಈ ನಡುವೆ ಗಲ್ಫ್ ರಾಷ್ಟ್ರಗಳಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ಮೇ.03 ರ ಲಾಕ್ ಡೌನ್ ತೆರವಾಗುವವರೆಗೂ ವಾಪಸ್ ಕರೆಸಿಕೊಳ್ಳಲು ಭಾರತ ನಿರಾಕರಿಸಿದ್ದು, ಭಾರತೀಯರು ಸಿಲುಕಿಕೊಂಡಿರುವ ದೇಶಗಳಿಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಸರ್ಕಾರ ಭರವಸೆ ನೀಡಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಗಲ್ಫ್ ರಾಷ್ಟ್ರಗಳಿಗೆ ಅಗತ್ಯವಿರುವ ಆಹಾರ ಪೂರೈಕೆಯನ್ನೂ ಭಾರತ ಮಾಡಲಿದೆ ಎಂದು ಜೈಶಂಕರ್ ಹೇಳಿರುವ ಬಗ್ಗೆ ಎಂಇಎ ಮೂಲಗಳು ಮಾಹಿತಿ ನೀಡಿದೆ. ಇದೇ ವೇಳೆ ಸೌದಿ ಅರೇಬಿಯಾ, ಬಹ್ರೈನ್, ಒಮನ್, ಕತಾರ್, ಈಜಿಪ್ಟ್, ಪ್ಯಾಲೆಸ್ತೇನ್ ಗಳಿಗೆ ಭಾರತ ಹೈಡ್ರಾಕ್ಸಿ ಕ್ಲೋರೋಕ್ವಿನ್ ಹಾಗೂ ಪ್ಯಾರಸಿಟಮೋಲ್ ಗಳನ್ನು ಕಳಿಸುವುದಾಗಿ ಭರವಸೆ ನೀಡಿದೆ.

ಈ ಎಲ್ಲಾ ಅಂಶಗಳ ಹೊರತಾಗಿ ಟ್ವಿಟರ್ ನಲ್ಲಿ ನಕಲಿ ಹಾಗೂ ರಾಜತಾಂತ್ರಿಕ ಸಂಬಂಧಕ್ಕೆ ಧಕ್ಕೆಯಾಗುವಂತಹ ಅಂಶಗಳು ಹರಡುತ್ತಿರುವುದರ ಬಗ್ಗೆಯೂ ಭಾರತ ಪ್ರಸ್ತಾಪಿಸಿದ್ದು  ಒಮನ್ ನಲ್ಲಿರುವ ಭಾರತೀಯರು ಯಾರೂ ಈ ಬಗ್ಗೆ ಆತಂಕಪಡಬೇಕಿಲ್ಲ ಎಂದು ಹೇಳಿದೆ.

ಭಾರತದಲ್ಲಿರುವ ಮುಸ್ಲಿಮ್ ಸಹೋದರ ಸಹೋದರಿಯರ ಜೊತೆಗೆ ಒಮನ್ ನಿಲ್ಲಲಿದೆ. ಭಾರತ ಸರ್ಕಾರವೇನಾದರೂ ಮುಸ್ಲಿಮರಿಗೆ ಕಿರುಕುಳ ನೀಡುವುದನ್ನು ನಿಲ್ಲಿಸದೇ ಹೋದಲ್ಲಿ, ಒಮನ್ ನಲ್ಲಿರುವ 1 ಮಿಲಿಯನ್ ಭಾರತೀಯರನ್ನು ಹೊರಹಾಕಬೇಕಾಗುತ್ತದೆ ಎಂಬ ಸಂದೇಶವನ್ನು ಒಮನ್ ರಾಜಮನೆತನದ ಸದಸ್ಯೆ ಸಯ್ಯಿದಾ ಮೋನಾ ಬಿಂಟ್ ಫಹಾದ್ ಅಲ್ ಸೈದ್ ಹೆಸರಿನ ನಕಲಿ ಟ್ವೀಟ್ ಖಾತೆಯಲ್ಲಿ ಎಚ್ಚರಿಕೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಭಾರತದ ನಾಯಕರು ಮುಸ್ಲಿಂ  ರಾಷ್ಟ್ರಗಳ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ.

Comments