ಮಹಾರಾಷ್ಟ್ರದ ಪಾಲ್ಘರ್ ನಂತರ ಪಂಜಾಬ್ ನಲ್ಲಿ ಹಿಂದೂ ಸಂತನ ಮೇಲೆ ಮಾರಣಾಂತಿಕ ಹಲ್ಲೆ

ಮಹಾರಾಷ್ಟ್ರದ ಪಾಲ್ಘರ್ ಪ್ರಕರಣದ ಕಿಡಿ ಅರುವ ಮೊದಲೇ ಇದೀಗ ಬಂದ ಸುದ್ದಿಯ ಪ್ರಕಾರ  ಪಂಜಾಬ್ ನಲ್ಲಿ ದುಷ್ಕರ್ಮಿಗಳು ಸ್ವಾಮೀಜಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.ಹಲ್ಲೆಗೊಳಗಾದ ಸ್ವಾಮೀಜಿಯನ್ನು ಹೋಶಿಯಾರ್‌ಪುರದ ಸ್ವಾಮಿ ಪುಷ್ಪೇಂದ್ರ ಸ್ವಾಮೀಜಿ ಎಂದು ಗುರುತಿಸಲಾಗಿದೆ.ಶುಕ್ರವಾರ (ಏಪ್ರಿಲ್ 24, 2020) ರಾತ್ರಿ 10 ರ ಸುಮಾರಿಗೆ ಸ್ವಾಮಿ ಪುಷ್ಪೇಂದ್ರ ಸ್ವರೂಪ್ ಹೋಶಿಯಾರ್‌ಪುರದ ಆಶ್ರಮದಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು ಈ ವೇಳೆ ಆಶ್ರಮಕ್ಕೆ ಅಕ್ರಮ ಪ್ರವೇಶ ಮಾಡಿ ಒಳ ಬಂದ ಶಸ್ತ್ರ ಸಜ್ಜಿತ ದುಷ್ಕರ್ಮಿಗಳು ಏಕಾ ಏಕಿ ಹಲ್ಲೆ ನಡೆಸಿದ್ದಾರೆ.ಅಪರಿಚಿತ ಹಲ್ಲೆಕೋರರು ಮುಖವಾಡ ಧರಿಸಿ ಈ ದಾಳಿ ಮಾಡಿದ್ದು,ಹಲ್ಲೆಯ ವೇಳೆ ಸ್ವಾಮೀಜಿಯ ಕೈ ಕಾಲನ್ನು ಕಟ್ಟಿ ಹಾಕಿ ದುಷ್ಕರ್ಮಿಗಳು ಆಶ್ರಮದಿಂದ 50 ಸಾವಿರ ನಗದು ಸೇರಿ ಇತರ ವಸ್ತುಗಳ ಜೊತೆ ಪರಾರಿಯಾಗಿದ್ದಾರೆ.

ಸ್ವಾಮಿ ಪುಷ್ಪೇಂದ್ರ ಸ್ವರೂಪ್ ಅವರು ದಾಳಿಕೋರರಿಗೆ ನೀವು ಹಣ ತೆಗೆದುಕೊಂಡು ಹೋಗಿ ಹಲ್ಲೆ ಮಾಡಬೇಡಿ ಎಂದು ಅದೆಷ್ಟೇ ಹೇಳಿದರು ಕೇಳದ ದಾಳಿಕೋರರು ಈ ಕೃತ್ಯ ಎಸಗಿದ್ದಾರೆ.ಘಟನೆ ಸಂಬಂಧಿಸಿ ಹೋಶಿಯಾರ್‌ಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.ಈ ಸಂಬಂಧ  ಸಾಮಾಜಿಕ ಜಾಲ ತಾಣದಲ್ಲಿ ಪಂಜಾಬ್ ಸರ್ಕಾರ ವಿರುದ್ಧ  ಆಕ್ರೋಶ ವ್ಯಕ್ತ ವಾಗಿದ್ದು, ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಸಾಧುಗಳಿಗೆ ರಕ್ಷಣೆ ಇಲ್ಲವೆಂದಿದ್ದಾರೆ ನೆಟ್ಟಿಗರು.

Comments