ತಾಯಿಂದ ಬೇರ್ಪಟ್ಟ ಮಗುವಿಗೆ ತಾಯಿಯ ಪ್ರೀತಿ ತೋರಿಸಿದ ದಾದಿಯರು

ಛತ್ತೀಸ್ಗಡ ದಲ್ಲಿ ಕೋರನ ಸೋಂಕಿಗೆ ತುತ್ತಾದ ತಾಯಿಯಿಂದ ಬೇರ್ಪಟ್ಟ ಮಗುವಿಗೆ ತಾಯಿಯ ಪ್ರೀತಿ ತೋರಿಸಿ ಹಾಲು ಕುಡಿಸಿದ ಶುಶ್ರೂಷಕಿಯರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ .ರಾಯಪುರ ಏಮ್ಸ್ ನಲ್ಲಿ ದಾಖಲಾದ ಮಹಿಳೆಗೆ ಕೋರನ ಸೋಂಕು ದೃಢಪಟ್ಟ ಬೆನ್ನಲ್ಲೇ ಮೂರು ತಿಂಗಳ ಮಗುವನ್ನು ಪ್ರತ್ಯೇಕಿಸಿ ಕ್ವಾರಂಟೈನ್ ಲ್ಲಿ ಇರಿಸಲಾಗಿತ್ತು .ತಾಯಿಯ ಅನುಪಮ ಸ್ಥಿತಿಯಲ್ಲಿ ವೈದ್ಯಕೀಯ ಸಿಬ್ಬಂದಿಗಳು ಮಗುವಿಗೆ ಬೇಕಾದ ಆರೈಕೆಯನ್ನು ನೀಡುತ್ತಿದ್ದಾರೆ. ಸದ್ಯ ಮಗುವಿನ ತಾಯಿ ಮತ್ತು ಅಜ್ಜಿ ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಶೀಘ್ರವಾಗಿ ಗುಣಮುಖವಾಗುವಂತೆ ಜನ ಹಾರೈಸುತ್ತಿದ್ದಾರೆ ಎಂದು ವರದಿಯಾಗಿದೆ .ವಿಡಿಯೋ ನೋಡಿ

Comments