20 ರ ಬಳಿಕ ಈ ಜಿಲ್ಲೆಯಲ್ಲಿ ಮಾತ್ರ ಮದ್ಯ ಮಾರಾಟಕ್ಕೆ ಅವಕಾಶ !

ಕರ್ನಾಟಕದಲ್ಲಿ ಲಾಕ್  ಡೌನ್ ಪರಿಣಾಮ ಕಳೆದ  24 ದಿನಗಳಿಂದ ಮದ್ಯ ಸಿಗದೆ ಪರದಾಡುತ್ತಿರುವ ಪಾನ ಪ್ರಿಯರಿಗೆ ಕೇಂದ್ರ ಸರ್ಕಾರದ ಮಾರ್ಗಸೂಚಿಗಳು ಕಟುವಾಗಿ ಪರಿಣಮಿಸಿದೆ .ಪರಿಣಾಮ ಎಲ್ಲಾ ಕಡೆ ಮದ್ಯ ಮಾರಾಟಕ್ಕೆ ಸದ್ಯಕ್ಕೆ ಅವಕಾಶ ನಿರಾಕರಿಸಲಾಗಿದೆ .ರಾಜ್ಯದ ಆರ್ಥಿಕತೆಗೆ  ಚೇತರಿಕೆ ನೀಡುವ  ನಿಟ್ಟಿನಲ್ಲಿ ರಾಜ್ಯ ಸರ್ಕಾರ 14 ರ ನಂತರ ರಾಜ್ಯದಲ್ಲಿ ಎಂಎಸ್ಐಎಲ್ ಮಳಿಗೆಗಳಲ್ಲಿ ಮದ್ಯ ಮಾರಾಟ ನಡೆಸಲು ಚಿಂತನೆ ನಡೆಸಿತ್ತು .ಆದರೆ ಕೇಂದ್ರ ಹೊಸದಾಗಿ ಹೊರಡಿಸಿರುವ ಪರಿಷ್ಕೃತ ಮಾರ್ಗಸೂಚಿಗಳ ಪ್ರಕಾರ ರಾಜ್ಯ ಸರ್ಕಾರ ಮದ್ಯ ಮಾರಾಟಕ್ಕೆ ಅನುಮತಿ ನೀಡಲು ಸಾಧ್ಯವಿಲ್ಲ .ಆದರೂ ಏಪ್ರಿಲ್ 20 ರ ನಂತರ ಅಲ್ಪ ಸ್ವಲ್ಪ ಮಟ್ಟಿಗೆ ನಿಯಮ ಸಡಿಲಿಕೆಗೆ ಆಗಬಹುದೆಂದು ಪ್ರಧಾನಿ ಮೋದಿಯವರು ಹೇಳಿದ್ದರು.

 ಹಾಗೊಂದು ವೇಳೆ ನಿಯಮ ಸಡಿಲಿಕೆ ಆದರೆ ಮದ್ಯ ಮಾರಾಟಕ್ಕೆ ಎಂಎಸ್ಐಎಲ್ ಹಾಗೂ ರಿಟೇಲ್ ಮಳಿಗೆಗಳಲ್ಲಿ ಪಾರ್ಸೆಲ್ ಗೆ ಅವಕಾಶ ನೀಡುವ ಸಾಧ್ಯತೆ ಇದೆ .ಪ್ರಮುಖವಾಗಿ  ಹಾಟ್ ಸ್ಪಾಟ್ ಪ್ರದೇಶವಾದ  ಬೆಂಗಳೂರು ನಗರ, ಮೈಸೂರು, ಬೆಳಗಾವಿ ,ದಕ್ಷಿಣ ಕನ್ನಡ ,ಬೀದರ್ , ಬಾಗಲಕೋಟೆ ,   ಕಲಬುರ್ಗಿ, ಧಾರವಾಡ ಜಿಲ್ಲೆಗಳನ್ನು  ಹೊರತುಪಡಿಸಿ ಬೇರೆ ಎಲ್ಲಾ ಜಿಲ್ಲೆಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡುವ ಸಂಭವ ಇದೆ ಎಂದು ಹೇಳಲಾಗಿದೆ .


Comments