ವಿಕೃತಿ ಮೆರೆಯುವ ತಬ್ಲಿಘಿಗಳ ತಪಾಸಣೆಗೆ ಆಗಮಿಸಿದ ಭಾರತೀಯ ಸೇನಾ ಸಿಬ್ಬಂದಿ

ಕೊರೊನ ಕ್ವಾರಂಟೈನ್ ಕೋಣೆಯ ಮುಂದೆಯೇ ದೆಹಲಿ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದ ಇಬ್ಬರು ತಬ್ಲಿಘಿಗಳು ಕ್ವಾರಂಟೈನ್ ಕೊಠಡಿಯ ಮುಂದೆಯೇ ಮಲವಿಸರ್ಜನೆ ಮಾಡಿ ವಿಕೃತಿ ಮರೆದಿರುವಂತಹ ಘಟನೆ ದೆಹಲಿಯ ನರೇಲಾ ಕ್ವಾರಂಟೈನ್ ಕೇಂದ್ರದಲ್ಲಿ ನಡೆದಿದೆ.ಇನ್ನು ನರೇಲಾ ಕ್ವಾರಂಟೈನ್ ಕೇಂದ್ರದ ತಪಾಸಣೆ ಉಸ್ತುವಾರಿಯನ್ನು ಭಾರತೀಯ ಸೇನೆ ತೆಗೆದುಕೊಂಡಿದೆ ಎಂದು ವರದಿಯಾಗಿದ್ದು, ರಿಪಬ್ಲಿಕ್ ಟಿವಿ ನ್ಯೂಸ್ ವರದಿಗಳ ಪ್ರಕಾರ ಭಾರತೀಯ ಸೇನೆಯ ವೈದ್ಯಕೀಯ ಸಿಬ್ಬಂದಿ ವರ್ಗ ನಾಗರಿಕ ವೈದ್ಯಕೀಯ ಸಿಬ್ಬಂದಿ ಜೊತೆಗೂಡಿ ಈ ಕೇಂದ್ರದಲ್ಲಿ ತಬ್ಲಿಘಿಗಳ ತಪಾಸಣೆ ನಡೆಸಲಿದ್ದಾರೆ .ಭಾರತೀಯ ಸೇನಾ ವೈದ್ಯಕೀಯ ಸಿಬ್ಬಂದಿಗಳು ಕೂಡ ಕೊರೊನ ವೈರಸ್ ವಿರುದ್ಧ ಹೋರಾಡಲು ಎಲ್ಲ ರೀತಿಯ ತಯಾರನ್ನು ಮಾಡುತ್ತಿದ್ದಾರೆ ಎಂದು ಸೇನಾ ಪಡೆಗಳು ಸ್ಪಷ್ಟಪಡಿಸಿದೆ . ಸದ್ಯ ಕ್ವಾರಂಟೈನ್ ಕೋಣೆಯ ಮುಂದೆ ಮುಲವಿಸರ್ಜನೆ ಮಾಡಿದ ಇಬ್ಬರ ಮೇಲೆ ದೂರು ದಾಖಲಾಗಿದೆ. ಈ ಇಬ್ಬರು ಆರೋಪಿಗಳು ಉತ್ತರ ಪ್ರದೇಶದ ಬರಾಬಂಕಿ ನಿವಾಸಿಗಳಾಗಿದ್ದು, ಕಳೆದ ತಿಂಗಳು ದೆಹಲಿಯ ನಿಜಾಮುದ್ದೀನ್‍ನಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದರು ಎಂದು ಮಾಹಿತಿ ಹೊರಬಿದ್ದಿದೆ.

Comments