ವೈದ್ಯರ ಮೇಲೆ ಹಲ್ಲೆ ನಡೆಸಿದವರ ಎಲ್ಲಾ ಪ್ರಕ್ರಿಯೆಯನ್ನು 24 ಗಂಟೆಯೊಳಗೆ ಮುಗಿಸಿ ತಕ್ಕ ಪಾಠ ಕಲಿಸಿದ ಯೋಗಿ ಸರಕಾರ!

ಕೊರೊನಾ ಸೋಂಕಿತನ ಸಂಪರ್ಕಕ್ಕೆ ಒಳಗಾದವರ ಪರೀಕ್ಷೆಗೆ ತೆರಳುತ್ತಿದ್ದ ವೈದ್ಯರು ಹಾಗೂ ಅಂಬ್ಯುಲೆನ್ಸ್ ಮತ್ತು ಪೋಲೀಸರ ಮೇಲೆ ದಾಳಿ ನಡೆಸಿದ್ದ ಉತ್ತರಪ್ರದೇಶದ ಮೊರದಾಬಾದ್ ನ 7 ಮಹಿಳೆಯರು ಸೇರಿದಂತೆ 17 ಜನರನ್ನು ಯೋಗಿ ಸರಕಾರ ಘಟನೆ ನಡೆದ 24 ಗಂಟೆಯಲ್ಲೇ ಪತ್ತೆ ಹಚ್ಚಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿ ಎನ್.ಎಸ್.ಎ ಆಕ್ಟ್ ನಡಿ ಬಂಧಿಸಿ ಹಲವು ಸೆಕ್ಷನ್ ಗಳನ್ನು ಹಾಕಿ ಜೈಲಿಗಟ್ಟಿದೆ. ಈ ಎಲ್ಲಾ ಪ್ರಕ್ರಿಯೆಗಳು 24 ಗಂಟೆಯೊಳಗೆ ನಡೆದಿದೆ. ಯೋಗಿ ಸರಕಾರದ ಈ ನಡೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು ,ರಾಜಸ್ತಾನ ರಾಜ್ಯಪಾಲ ಕಲ್ರಾಜ್ ಮಿಶ್ರ ಕೂಡ ಯುಪಿ ಸರ್ಕಾರದ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Comments